ಡೆಡ್ಲಿ ಹೆಡ್ಲಿ ತಂದೆ ಅಂತ್ಯಕ್ರಿಯೆಯಲ್ಲಿದ್ದ ಪಾಕ್ ಪ್ರಧಾನಿ ಗಿಲಾನಿ

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಚಿಕಾಗೊ ಕೋರ್ಟ್‌ನಲ್ಲಿ ಸಹ ಆರೋಪಿ ತಹಾವೂರ್ ರಾಣಾ ವಿಚಾರಣೆ ವೇಳೆ 50ರ ಹರೆಯದ ಹೆಡ್ಲಿ ಈ ವಿಷಯ ಬಹಿರಂಗಪಡಿಸಿದ್ದಾನೆ.
2010ರಲ್ಲಿ ತನ್ನ ತಂದೆ ಸಯ್ಯದ್ ಸಲೀಂ ಗಿಲಾನಿ ಮೃತಪಟ್ಟಾಗ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿದ್ದ ಪ್ರಧಾನಿ ಗಿಲಾನಿ ಬಳಿಕ ತಂದೆಯ ಅಂತ್ಯಸಂಸ್ಕಾರದಲ್ಲಿಯೂ ಪಾಲ್ಗೊಂಡಿದ್ದರು ಎಂದು ಹೇಳಿದ್ದಾನೆ. ಸಲೀಂ ಗಿಲಾನಿ ಖ್ಯಾತ ಕವಿ, ಲೇಖಕ ಹಾಗೂ ಸಂಗೀತ ವಿದ್ವಾಂಸರಾಗಿದ್ದರು. ಪಾಕಿಸ್ತಾನ್ ರೇಡಿಯೋದ ಮಾಜಿ ಮಹಾನಿರ್ದೇಶಕ ಹಾಗೂ ವಾಷಿಂಗ್ಟನ್ ಡಿಸಿಯ ಪಾಕಿಸ್ಥಾನಿ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಹೆಡ್ಲಿಯ ಸಹೋದರ ದನ್ಯಾಲ್ ಗಿಲಾನಿ, ಪ್ರಧಾನಿ ಗಿಲಾನಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.












Click it and Unblock the Notifications