ಗೂಗಲ್‌ ಸ್ಟ್ರೀಟ್‌ ವ್ಯೂ ಬೆಂಗಳೂರಿಗೂ ಬಂತು

google street view, bangalore
ಬೆಂಗಳೂರು, ಮೇ 27: ಬೆಂಗಳೂರಿನಲ್ಲಿ ಇನ್ನು ಅಡ್ರೆಸ್‌ ಹುಡುಕೋದು ಕಷ್ಟದ ಕೆಲಸವಲ್ಲ. ಏಕೆಂದರೆ ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಇನ್ನು ಬೆಂಗಳೂರಿನ ಬೀದಿ ಬೀದಿಗಳ ದೃಶ್ಯ ಲಭ್ಯವಾಗಲಿದೆ. ವಿಶೇಷವೆಂದರೆ ಭಾರತದಲ್ಲಿ ಹೀಗೆ ಸ್ಟ್ರೀಟ್‌ ವ್ಯೂಗೆ ಒಳಪಡುತ್ತಿರುವ ಮೊದಲ ನಗರಿ ಬೆಂಗಳೂರು!

ಈಗಾಗಲೇ 100 ನಗರಗಳ ಸ್ಟ್ರೀಟ್‌ ವ್ಯೂಗೆ ಸಿಕ್ಕಿರುವ ಯಶಸ್ಸನ್ನು ಗಮನಿಸಿ ಬೆಂಗಳೂರನ್ನು ಸ್ಟ್ರೀಟ್‌ ವ್ಯೂ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ ಎಂದು ಗೂಗಲ್‌ ಸಂಸ್ಥೆ ಪ್ರಕಟಿಸಿದೆ. www.google.co.in/streetview ವೆಬ್‌ಸೈಟ್‌ನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬೀದಿ ಬೀದಿಗಳ ದೃಶ್ಯ ಲಭ್ಯವಾಗಲಿದೆ.

ಇದು ಹೇಗೆ ಸಾಧ್ಯವೆಂದರೆ ಕಾರು ಅಥವಾ ರಿಕ್ಷಾಗಳ ಮೇಲೆ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಿ ಇಡೀ ಬೆಂಗಳೂರಿನ ಬೀದಿ ಬೀದಿಗಳಲ್ಲೂ ಸುತ್ತಾಡಲಾಗುವುದು. ಹೀಗೆ ಚಿತ್ರೀಕರಿಸಿದ ದೃಶ್ಯಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ಸೇರಿಸಲಾಗುವುದು.

ಪ್ರಯೋಜನ ಏನು?:
ಸಾರ್ವಜನಿಕರು ಇಂಟರ್ ನೆಟ್‌ ಸೌಲಭ್ಯವಿರುವ ಕಂಪ್ಯೂಟರ್/ಮೊಬೈಲ್‌ ಮೂಲಕವೇ ಇಡೀ ಬೆಂಗಳೂರಿನ ಬೀದಿ ಬೀದಿ ಹೇಗಿದೆ ಎಂದು ನೋಡಬಹುದು. ತಾವು ಯಾವುದಾದರೂ ಸ್ಥಳಕ್ಕೆ ತೆರಳಬೇಕಿದ್ದರೆ ಅಲ್ಲಿಗೆ ಹೇಗೆ ಹೋಗಬೇಕು ಎಂಬುದನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಬಹುದು. ಇದಲ್ಲದೆ ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಈ ಮ್ಯಾಪ್‌ ನೆರವು ನೀಡಲಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳಿಗೂ ನಗರದ ಮೂಲೆ ಮೂಲೆಗಳ ದೃಶ್ಯ ನೆರವು ನೀಡುತ್ತವೆ. ಮನೆ ಹುಡುಕುವವರಿಗೆ ಆ ಜಾಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು, ವಾಹನ ಸವಾರರು ಹೋಗಬೇಕಾದ ಸ್ಥಳಗಳಿಗೆ ಸುಲಭವಾಗಿ ತಲುಪಬಹುದು.

ಬೆಂಗಳೂರಿನಲ್ಲಿ ಏಕೆ?: ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ 'ಸ್ಟ್ರೀಟ್‌ ವ್ಯೂ' ಸಾಫ್ಟ್ ವೇರ್ ತಯಾರಿಕೆಯಲ್ಲಿ ಬೆಂಗಳೂರಿನಲ್ಲಿರುವ ಗೂಗಲ್‌ ಕೇಂದ್ರದ ಕೊಡುಗೆಯೂ ಇದೆ. ಹೀಗಾಗಿ ಭಾರತದ ಮೊದಲ ಸ್ಟ್ರೀಟ್‌ ವ್ಯೂ ಮ್ಯಾಪ್‌ಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+