ಖಾಸಗಿ ಹಾಲು ಲೀಟರ್ ಗೆ 3 ರುಪಾಯಿ ಏರಿಕೆ
ಬೆಂಗಳೂರು,
ಮೇ 27: ಖಾಸಗಿ ಹಾಲು ಸರಬರಾಜು ಕಂಪನಿಗಳು ಲೀಟರ್ ಹಾಲಿಗೆ ಮೂರು ರುಪಾಯಿ ಹೆಚ್ಚಳ ಮಾಡಿವೆ. ಹೆರಿಟೇಜ್, ದೊಡ್ಲ, ತಿರುಮಲ ಸೇರಿದಂತೆ ಖಾಸಗಿ ಕಂಪನಿಗಳು ಈ ಏರಿಕೆ ಮಾಡಿವೆ. ಹೆರಿಟೇಜ್ ಮೇ 16ರಿಂದಲೇ ದರ ಏರಿಕೆ ಮಾಡಿದ್ದರೆ ದೊಡ್ಲ ಮತ್ತು ತಿರುಮಲ ಮೇ 26ರಿಂದ ಹೆಚ್ಚಿಸಿವೆ. id="toptextpromo">ಪ್ರಸ್ತುತ
ನಂದಿನಿ ಸಾಮಾನ್ಯ ಹಾಲು ಲೀಟರ್ ಗೆ 21 ರು. ಇದ್ದರೆ ಖಾಸಗಿ ಹಾಲಿನ ದರ 27 ರು. ಆಗಿದೆ. ಫೆಬ್ರವರಿ 14ರಂದು ಕೆಎಂಎಫ್ ನಂದಿನಿ ಹಾಲಿನ ದರ ಲೀಟರ್ ಗೆ 2 ರುಪಾಯಿ ಹೆಚ್ಚಿಸಿತ್ತು. ಅದರ ಹಿಂದೆಯೇ ಖಾಸಗಿ ಕಂಪನಿಗಳೂ 2 ರು. ಹೆಚ್ಚಳ ಮಾಡಿದ್ದವು. id='are-slot-1' class='oiad oi-axt oiadv'> id='top-searched-articles'>ನಂದಿನಿ
ಹಾಲು ನಗರದಲ್ಲಿ ಪ್ರತಿದಿನ ಸುಮಾರು 15 ಲಕ್ಷ ಲೀಟರ್, ರಾಜ್ಯಾದ್ಯಂತ 28 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತದೆ. ಖಾಸಗಿ ಕಂಪನಿಗಳು 4-5 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿವೆ. ಈ ಮಧ್ಯೆ, ಕೆಎಂಎಫ್ ಮತ್ತೆ ಹಾಲಿನ ದರವನ್ನು ಲೀಟರ್ ಗೆ 3 ರುಪಾಯಿ ಏರಿಸುವ ಸಾಧ್ಯತೆ ಇದೆ.











Click it and Unblock the Notifications