ರಾಜ್ಯಾದ್ಯಂತ ಹೊಸ ಎಲ್‌ಪಿಜಿ ಸಂಪರ್ಕ ಮತ್ತೆ ಆರಂಭ

ರಾಜ್ಯದಲ್ಲಿ ಅಕ್ರಮ ಎಲ್‌ಪಿಜಿ ಸಂಪರ್ಕಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಳೆದ ಜನವರಿಯಲ್ಲಿ ಕೈಗೆತ್ತಿಕೊಂಡ ಅಭಿಯಾನದ ನಂತರ ಹೊಸ ಎಲ್‌ಪಿಜಿ ಸಂಪರ್ಕ ನೀಡುವುದನ್ನು ತಡೆಹಿಡಿದಿತ್ತು.
ಹೊಸ ಸಂಪರ್ಕ ನೀಡುವಲ್ಲಿ ಯಾವುದೇ ಅಕ್ರಮಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಎಲ್‌ಪಿಜಿ ವಿತರಕರು ಅರ್ಜಿದಾರರ ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಮನೆಯ ಅಂಚೆ ವಿಳಾಸವನ್ನು ಕಡ್ಡಾಯವಾಗಿ ಪಡೆಯುತ್ತಿದ್ದಾರೆ.
'ಅರ್ಜಿದಾರರು ಸಲ್ಲಿಸುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಹೊಸ ಎಲ್‌ಪಿಜಿ ಸಂಪರ್ಕ ನೀಡುವಂತೆ ನಾವು ನಮ್ಮ ವಿತರಕರಿಗೆ ಸೂಚನೆ ನೀಡಿದ್ದೇವೆ. ಅಗತ್ಯ ಬಂದಲ್ಲಿ ಅರ್ಜಿದಾರರು ನೀಡುವ ಅಂಚೆ ವಿಳಾಸವನ್ನು ಖುದ್ದಾಗಿ ಹೋಗಿ ಪರಿಶೀಲಿಸಲಾಗುವುದು' ಎಂದು ತೈಲ ಕಂಪನಿಯೊಂದು ಹೇಳಿದೆ.












Click it and Unblock the Notifications