ಭಾರತದ ಎಂಜಿನಿಯರುಗಳು ನಿಜಕ್ಕೂ ಮೇಧಾವಿಗಳು: ಅಕ್ಸೆಂಚರ್

'ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಯಸ್ಸಾದ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಗಣಿತ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನಾವು ಕೊರತೆ ಅನುಭವಿಸುತ್ತಿದ್ದೇವೆ' ಎಂದೂ ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ನ್ಯಾನ್ ಟರ್ಮೆ ಹೇಳಿದ್ದಾರೆ.
'ಭಾರತದಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆ ಸದ್ಯದಲ್ಲೇ 70 ಸಾವಿರ ಗಡಿ ದಾಟಲಿದೆ. ಕಂಪನಿಯು ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಅಮೆರಿಕದಲ್ಲಿ 30 ಸಾವಿರ ಮಂದಿ ಇದ್ದಾರಷ್ಟೆ. ಇಡೀ ವಿಶ್ವದಲ್ಲಿ ಕಂಪನಿ 2 ಲಕ್ಷ 15 ಸಾವಿರ ಮಂದಿ ಉದ್ಯೋಗಿಗಳನ್ನು ಹೊಂದಿದೆ' ಎಂದು ಅವರು ತಿಳಿಸಿದ್ದಾರೆ.
'ಕಂಪನಿಯು ಭಾರತದಲ್ಲಿ ಇನ್ನು ಮುಂದೆ ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತೊಡಗಲಿದೆ. ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಲಿದ್ದೇವೆ. ಆದ್ದರಿಂದ ನಾನಾ ಕ್ಷೇತ್ರಗಳಲ್ಲಿ ಆಳ ಜ್ಞಾನ ಹೊಂದಿರುವ ಎಂಜಿನಿಯರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಿದ್ದೇವೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications