ಬೆಂಗಳೂರಿನ 13 ರಸ್ತೆಗಳಿಗೆ ಎಸ್ಕಲೇಟರ್ಸ್ ಜೋಡಣೆ

Road Escalators
ಬೆಂಗಳೂರು, ಮೇ 25: ರಾಜಧಾನಿಯಲ್ಲಿ ಸಂಚಾರ ದಟ್ಟಣೆಯನ್ನು ಸ್ವಲ್ಪಮಟ್ಟಿಗೆ ತಹಬಂದಿಗೆ ತರಲು ಬೃಹತ್ ಮಹಾನಗರ ಪಾಲಿಕೆಯು ಎಸ್ಕಲೇಟರ್ ಆಧಾರಿತ ಪಾದಚಾರಿ ಮೇಲುಸೇತುವೆಗಳನ್ನು 13 ಕಡೆ ನಿರ್ಮಾಣ ಮಾಡಲು ಮುಂದಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 53 ಕಡೆ ಈ ರೀತಿಯ ಲಿಫ್ಟ್ ಆಧಾರಿತ ಪಾದಚಾರಿ ಮೇಲ್ಸೆತುವೆ ನಿರ್ಮಾಣಕ್ಕೆ ಬಹಳ ಹಿಂದೆಯೇ ಯೋಜನೆ ರೂಪಿಸಿತ್ತಾದರೂ 13 ಕಡೆ ಮೇಲು ಸೇತುವೆ ನಿರ್ಮಿಸಲು ಖಾಸಗಿ ಕಂಪನಿಗಳು ಮುಂದಾಗಿದ್ದರಿಂದ ಟೆಂಡರ್ ಪ್ರಕ್ರಿಯೆ ಮುಗಿದು ಆರ್ಥಿಕ ಬಿಡ್‌ದಾರರನ್ನು ಗುರುತಿಸಲಾಗಿದೆ.

ಮೊದಲ ಹಂತದಲ್ಲಿ ನಗರ ಹೃದಯ ಭಾಗದ ಕಬ್ಬನ್‌ಪಾರ್ಕ್‌ ರಸ್ತೆಯ ಕಂಠೀರವ ಕ್ರೀಡಾಂಗಣ ಮುಂಭಾಗದ ಸಿದ್ದಲಿಂಗಯ್ಯ ವೃತ್ತ, ಕಮೀಷನರೇಟ್‌ ರಸ್ತೆಯ ಗರುಡಾ ಮಾಲ್‌ ಮುಂಭಾಗ, ಸ್ಯಾಂಕಿ ರಸ್ತೆಯ ಎನ್‌ಟಿಐ ಸಂಪರ್ಕಿಸುವ ಗುಟ್ಟಹಳ್ಳಿ ಮತ್ತು ಅರಮನೆ ರಸ್ತೆ ನಡುವೆ, ಮೆಯೋಹಾಲ್‌, ಬಳ್ಳಾರಿ ರಸ್ತೆಯ ಗಂಗೇನಹಳ್ಳಿಯ ಎಎಸ್‌ಸಿ ಕೇಂದ್ರದ ಬಳಿ, ಅರಮನೆ ರಸ್ತೆಯ ಮೌಂಟ್‌ ಕಾರ್ಮಲ್‌ ಕಾಲೇಜು, ಹೊಸೂರು ರಸ್ತೆಯ ಫೋರಂ ಮಾಲ್‌ ಮುಂಭಾಗ, ರಾಜಾರಾಂ ಮೋಹನ್‌ರಾಯ್‌ ರಸ್ತೆಯ ಪಲ್ಲವಿ ಚಿತ್ರಮಂದಿರದ ಮುಂಭಾಗ, ರೇಸ್‌ಕೋರ್ಸ್‌ ರಸ್ತೆಯ ಚಾಲುಕ್ಯ ವೃತ್ತ, ಅರಮನೆ ರಸ್ತೆ ವೃತ್ತ, ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ಪಾಲಿಕೆ ಕಚೇರಿ ಮುಂಭಾಗ, ಮಲ್ಯ ಆಸ್ಪತ್ರೆ ಮುಂಭಾಗ, ಮೆಜೆಸ್ಟಿಕ್‌ ಬಳಿ ಆನಂದ್‌ರಾವ್‌ ವೃತ್ತ ಮತ್ತು ಕೋಡೇಸ್‌ ವೃತ್ತದ ನಡುವೆ ಲಿಫ್ಟ್ ಅಥವಾ ಎಸ್ಕಲೇಟರ್ ಆಧಾರಿತ ಪಾದಚಾರಿ ಮೇಲು ಸೇತುವೆ ನಿರ್ಮಾಣಗೊಳ್ಳಲಿದೆ.

ಮೇಲು ಸೇತುವೆಯ ಎರಡೂ ಬದಿ ಲಿಫ್ಟ್ ಗಳನ್ನು ಅಳವಡಿಸಲಾಗುತ್ತದೆ. ರಸ್ತೆ ದಾಟುವವರನ್ನು ಒಂದು ಕಡೆಯ ಲಿಫ್ಟ್ ಮೇಲಕ್ಕೆ ಕರೆದೊಯ್ದು ಬಿಡುತ್ತದೆ. ಅಲ್ಲಿಂದ ಸ್ವಲ್ಪ ದೂರ ನಡೆದರೆ ಮತ್ತೂಂದು ಲಿಫ್ಟ್ ರಸ್ತೆಯ ಇನ್ನೊಂದು ಬದಿಗೆ ಬಿಡುತ್ತದೆ. ಜಾಗದ ಲಭ್ಯತೆ, ವಿದ್ಯುತ್‌ ಸಂಪರ್ಕ ಮತ್ತಿತರ ಅವಶ್ಯಕತೆಗಳನ್ನು ನೋಡಿಕೊಂಡು ಲಿಫ್ಟ್ ಅಥವಾ ಎಸ್ಕಲೇಟರ್ ಅಳವಡಿಸುವ ಬಗ್ಗೆ ಗುತ್ತಿಗೆ ಪಡೆದ ಸಂಸ್ಥೆಗಳು ನಿರ್ಧಾರ ಕೈಗೊಳ್ಳಲಿವೆ.

20 ವರ್ಷಗಳ ಕಾಲ ಡಿಬಿಒಟಿ (ರೂಪಿಸಿ, ನಿರ್ಮಿಸಿ, ಚಾಲನೆ ಮಾಡಿ, ವರ್ಗಾಯಿಸಿ) ಆಧಾರದ ಮೇಲೆ ಖಾಸಗಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಈ ಪಾದಚಾರಿ ಮೇಲು ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದೆ. ಪಾಲಿಕೆಯಿಂದ ಯಾವುದೇ ರೀತಿಯ ಹಣ ಇದಕ್ಕೆ ವೆಚ್ಚ ಮಾಡುತ್ತಿಲ್ಲ. ಬದಲಿಗೆ ಸೇತುವೆ ಎರಡೂ ಬದಿ ಜಾಹೀರಾತು ಪ್ರದರ್ಶಿಸುವ ಹಕ್ಕುಗಳನ್ನು ಖಾಸಗಿ ಸಂಸ್ಥೆಗೆ ನೀಡಲಾಗುವುದು. ಆದರೆ, ವಾರ್ಷಿಕ ಲೈಸೆನ್ಸ್‌ ಶುಲ್ಕವನ್ನೂ ನಿಗದಿಪಡಿಸಲಾಗಿದೆ. ಪಾಲಿಕೆಗೆ ಪ್ರತಿ ಸೇತುವೆಯಿಂದ ವರ್ಷಕ್ಕೆ 30 ಲಕ್ಷ ರೂ.ನಷ್ಟು ಶುಲ್ಕವೂ ಸಂದಾಯವಾಗುತ್ತದೆ.

ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ರಸ್ತೆ ದಾಟಲು ಪ್ರಯಾಸ ಪಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪಾಲಿಕೆಗೆ ಹೊರೆಯಾಗದಂತೆ ಪಾದಚಾರಿ ಮೇಲುಸೇತುವೆಗಳ ನಿರ್ಮಾಣಕ್ಕೆ ಮುಂದಾಗಲಾಗಿದೆ ಎಂದು ಮೇಯರ್ ಶಾರದಮ್ಮ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+