'ಟೆಕ್ನಾಲಜಿ ಪ್ರೊಫೆಸರುಗಳು ಹೆಚ್ಚೇನು ಬುದ್ಧಿವಂತರಲ್ಲ'

Jairam Ramesh
ನವದೆಹಲಿ, ಮೇ 24: ಐಐಟಿ, ಐಐಎಂಗಳಲ್ಲಿರುವ ಶಿಕ್ಷಕರು ವಿಶ್ವದರ್ಜೆಯವರೇನಲ್ಲ. ಅವರು ಅಸಾಧಾರಣರಾಗಿ ಕಾಣುವುದು ಏಕೆಂದರೆ ಅವರ ವಿದ್ಯಾರ್ಥಿಗಳ ಗುಣಮಟ್ಟ ಹಾಗಿರುತ್ತದೆ...ಕಡ್ಡಿ ಮುರಿದಂತೆ ಮಾತನಾಡುವ ಸಚಿವ ಎಂದೇ ಖ್ಯಾತರಾದ ಕೇಂದ್ರ ಪರಿಸರ ಸಚಿವ ಜೈರಾಂ ರಮೇಶ್‌ ಅವರ ಬಿಚ್ಚುನುಡಿ ಇದು.

ಅಂದಹಾಗೆ, ಜೈರಾಂ 1975ರಲ್ಲಿ ಮುಂಬೈ ಐಐಟಿಯಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದಿದ್ದಾರೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು. ಇಲ್ಲಿರುವ ಪ್ರೊಫೆಸರ್ ಗಳನ್ನು ಬುದ್ಧಿವಂತಿಕೆಯಲ್ಲಿ ಯಾರೂ ಮೀರಿಸಲಾರರು ಎಂಬ ಮಾತಿದೆ. ಅದು ಹುಸಿ ಎಂದು ಹೇಳುವ ಮೂಲಕ ಜೈರಾಂ ವಿವಾದಕ್ಕೆ ಸೋಮವಾರ ಬೀಜ ಬಿತ್ತಿದ್ದಾರೆ.

'ಪ್ರಯೋಜನಕ್ಕೆ ಬರುವ ಸಂಶೋಧನೆಗಳು ಐಐಟಿಗಳಲ್ಲಿ ನಡೆಯುವುದು ಕಡಿಮೆ. ಅಲ್ಲಿ ಪಾಠ ಮಾಡುವವರು ವಿಶ್ವದರ್ಜೆಯವರಲ್ಲ. ಐಐಟಿ ಮತ್ತು ಐಐಎಂಗಳು ಏಕೆ ಇಷ್ಟು ಪ್ರತಿಷ್ಠೆ ಹೊಂದಿವೆ ಅಂದರೆ ಅಲ್ಲಿ ಓದುವ ವಿದ್ಯಾರ್ಥಿಗಳು ಹಾಗಿರುತ್ತಾರೆ' ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+