ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ದಾಖಲೆ ಮಾಡಿದ ಪಿಲಿಕುಳ ಬ್ಲಾಕ್ ಕೋಬ್ರಾಗಳು

By Prasad
|
Google Oneindia Kannada News

Black cobra
ಮಂಗಳೂರು, ಮೇ 24 : ವಿಶ್ವದ ಅತಿ ದೊಡ್ಡ ಉರಗ ಉದ್ಯಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಿಲಿಕುಳ ಡಾ. ಶಿವರಾಮ ಕಾರಂತ್ ಜೈವಿಕ ಉದ್ಯಾನದಲ್ಲಿ ನಾಲ್ಕು ಬ್ಲಾಕ್ ಕೋಬ್ರಾಗಳು ಒಂದೇ ಬಾರಿಗೆ ಮೊಟ್ಟೆ ಇಟ್ಟು ವಿಶ್ವ ದಾಖಲೆ ಸ್ಥಾಪಿಸಿವೆ.

ಜೈವಿಕ ಉದ್ಯಾನಗಳಲ್ಲಿ ಬ್ಲಾಕ್ ಕೋಬ್ರಾಗಳು ಮೊಟ್ಟೆ ಇಟ್ಟ ದಾಖಲೆ ವಿಶ್ವದಲ್ಲೆಲ್ಲೂ ಇಲ್ಲ. ಕಾಡಿನಲ್ಲಿ ಪೂರಕ ಪರಿಸರದಲ್ಲಿ ಮೊಟ್ಟೆ ಇಡುತ್ತವಾದರೂ, ಜೈವಿಕ ಉದ್ಯಾನದಲ್ಲಿ ಬ್ಲಾಕ್ ಕೋಬ್ರಾಗಳು ಸಂತಾನೋತ್ಪತ್ತಿ ಮಾಡಿದ ಉದಾರಣೆಯೇ ಇಲ್ಲ. ಆದರೆ, ಪಿಲಿಕುಳದಲ್ಲಿ ಕಾಡಿನಲ್ಲಿದ್ದಂತೆಯೇ ವಾತಾವರಣವನ್ನು ಸೃಷ್ಟಿಸಲಾಗಿದ್ದರಿಂದ ಇದು ಸಾಧ್ಯವಾಗಿದೆ.

ಪಿಲಿಕುಳದಲ್ಲಿ 12 ಕೋಬ್ರಾಗಳಿದ್ದು, 5 ಹೆಣ್ಣು ಮತ್ತು 7 ಗಂಡಿವೆ. ಇವುಗಳಲ್ಲಿ ನಾಗಿಣಿ, ನಾಗವೇಣಿ, ನಾಗಮಣಿ, ರಾಣಿ ಎಂಬ ಹೆಣ್ಣು ಕೋಬ್ರಾಗಳನ್ನು ಮತ್ತು ನಾಗೇಂದ್ರ, ನಾಗರಾಜ, ರಾಜಾ ಮತ್ತು ಜಾಯ್ ಎಂಬ ಗಂಡು ಕೋಬ್ರಾಗಳನ್ನು ಪ್ರಯೋಗಾತ್ಮಕವಾಗಿ ಸಂತಾನೋತ್ಪತ್ತಿಗೆ ಅಣಿಗೊಳಿಸಲಾಗಿತ್ತು.

ಒಂದೊಂದು ಕೋಬ್ರಾಗಳೂ 20ರಿಂದ 30 ಮೊಟ್ಟೆಗಳನ್ನು ಇಡುತ್ತವೆ. ಪಿಲಿಕುಳದಲ್ಲಿ ದಾಖಲೆ ಸ್ಥಾಪಿಸಿರುವ ಕಪ್ಪು ನಾಗರಾಣಿಯರು ಎಷ್ಟು ತತ್ತಿಗಳನ್ನು ಇಟ್ಟಿವೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಾರ್ವಜನಿಕರಿಗೆ ಇನ್ನೂ ಪ್ರವೇಶ ಕೊಟ್ಟಿಲ್ಲ.

;
English summary
Four black cobras at Pilikkula Dr Shivaram Karanth biological park have created world record by laying eggs simultaneously. Usually black cobras lay egg in forests in a condusive environment. An environment like forest has been created for the black cobras in Pilikula snake park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X