ವಯಾಗ್ರಾ ಒಳ್ಳೇದೆ, ಆದರೆ ಕಿವಿ ತೂತು ಮಾಡುತ್ತೆ !

ವಯಾಗ್ರಾ ಸೇರಿದಂತೆ ಇನ್ನಿತರ ಪುರುಷತ್ವ ಉದ್ದೀಪನ ಔಷಧಗಳ ಬಳಕೆಯಿಂದಾಗುವ ದುಷ್ಟರಿಣಾಮಗಳ ಬಗ್ಗೆ ಜಾಗ್ರತೆ ವಹಿಸುವಂತೆ ಅಮೆರಿಕದ ಪರಿಣತರು ಎಚ್ಚರಿಕೆ ನೀಡಿದ್ದಾರೆ. 55 ವರ್ಷ ದಾಟಿದವರು ಈ ಔಷಧಗಳನ್ನು ಬಳಸಿದಾಗ ಕಿವುಡರಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. 35ರ ವಯಸ್ಸಿನವರಲ್ಲೂ ಇದರ ಅಡ್ಡ ಪರಿಣಾಂ ಕಂಡುಬಂದಿದೆ. ಆದರೆ ಅಷ್ಟು ತೀವ್ರವಾಗಿಲ್ಲ.
ಮತ್ತೊಂದು ವಿಷಯವೆಂದರೆ ಈ ಕಿವುಡುತನದ ಕಾಲಾವಧಿ ಇನ್ನೂ ತಿಳಿದುಬಂದಿಲ್ಲ. ಇದುವರೆಗೆ ಮೂವರಲ್ಲಿ ಒಬ್ಬರಿಗೆ ಇದು ದೀರ್ಘಾವಧಿ ಕಿವುಡುತನವಾಗಿರುವುದು ಪತ್ತೆಯಾಗಿದೆ. ಸೋಂಕಿನಿಂದ ಉಂಟಾಗುವ ಮತ್ತು ಭಾರಿ ಶಬ್ದದಿಂದ ಉಂಟಾಗುವ ಕಿವುಡತನದ ಸ್ವರೂಪದಲ್ಲಿ ಇದು ಕಾಣಿಸಿಕೊಳ್ಳುತ್ತದೆ.
Viagra, Cialis or Levitra ಅಂತಹ ಮಾತ್ರೆಗಳನ್ನು ಸೇವಿಸುವವರಲ್ಲಿ ಸ್ವಲ್ಪವ ಕಿವಿ ಬಾಧೆ ಕಾಣಿಸಿಕೊಂಡರು ತಕ್ಷಣ ಅದರ ಬಳಕೆಯನ್ನು ನಿಲ್ಲಿಸಿ, ವೈದ್ಯರನ್ನು ಸಂಪರ್ಕಿಸುವಂತೆ ಅಮೆರಿಕದ ಆಹಾರ ಮತ್ತು ಔಷಧ ಏಜೆನ್ಸಿ ಎಚ್ಚರಿಸಿದೆ. ವಯಾಗ್ರಾ ಉಂಟು ಮಾಡುವ ರಾಸಾಯನಿಕ ಕ್ರಿಯೆಗಳ ಪರಿಣಾಮದಿಂದ ಈ ಕಿವುಡುತನ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.












Click it and Unblock the Notifications