ಮೇ 21 ಕಂಠೀರವ ಕ್ರೀಡಾಂಗಣಕ್ಕೆ ಮಕ್ಕಳೊಂದಿಗೆ ಬನ್ನಿ

ವಿವಿಧ ವಯೋಮಿತಿಗೆ ಅನುಗುಣವಾಗಿ 50ರಿಂದ ಒಂದುವರೆ ಸಾವಿರ ಮೀಟರ್ ವರೆಗಿನ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಸುಮಾರ 800 ಸ್ಪರ್ಧಾಳುಗಳು ಭಾಗವಹಿಸಿವ ನಿರೀಕ್ಷೆ ಸಂಘಟಕರದ್ದು.
ವಿಶ್ವ ಅಥ್ಲೆಟಿಕ್ಸ್ ದಿನವನ್ನು ನಾಳೆ ಬೆಂಗಳೂರು ಆಚರಿಸಿಕೊಳ್ಳುತ್ತಿದೆ. ಈ ನಿಮಿತ್ತ ಬೆಳಗ್ಗೆ ಒಂಬತ್ತು ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿವೆ. ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ಮಾರ್ಗದರ್ಶನ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಒಕ್ಕೂಟದ ಸಹಯೋಗದೊಂದಿಗೆ ಫ್ಯೂಷನ್ ಅಥ್ಲೆಟಿಕಾ ಇದನ್ನು ಆಯೋಜಿಸಿದೆ.
ಯಾರೆಲ್ಲ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಾರೋ ಅವರು ತಲಾ 50 ರೂಪಾಯಿ ಪಾವತಿಸಬೇಕು. ಮಕ್ಕಳ ಆಟವನ್ನು ನೋಡಲು ನೀವು ಕುಟುಂಬ ಸಮೇತ ಬರಬಹುದು. ಯಾಕೆಂದರೆ ಪ್ರೇಕ್ಷಕರಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ.












Click it and Unblock the Notifications