ಪ್ರೀತಿಯ ಗಂಡ ಡೈವೋರ್ಸ್ ಕೇಳಿದ್ದಕ್ಕೆ ನೇಣಿಗೆ ಶರಣು
ಬೆಂಗಳೂರು,
ಮೇ 18: ಬೆಂಗಳೂರಿನ ಹಲಸೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಫ್ಯಾಷನ್ ವಿನ್ಯಾಸಕಿ ರುಚಿ ಶಾಂಡಿಲ್ಯ(27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಪದೇ ಪದೇ ಡೈವೋರ್ಸ್ ನೀಡುವಂತೆ ಒತ್ತಾಯಿಸುತ್ತಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಗಂಡನನ್ನು ತಾನು ಅತಿಯಾಗಿ ಪ್ರೀತಿಸುತ್ತಿದ್ದು, ಆತನನ್ನು ಬಿಟ್ಟು ಬದುಕುವುದು ಸಾಧ್ಯವಿಲ್ಲವೆಂದು ಆಕೆ ಬರೆದಿದ್ದಾಳೆ. ಆಕೆ ಒಟ್ಟು ಮೂರು ಡೆತ್ ನೋಟ್ ಬರೆದಿಟ್ಟಿದ್ದಳು. id="toptextpromo">ಫ್ಯಾಷನ್
ವಿನ್ಯಾಸ ಕೆಲಸದಲ್ಲಿದ್ದ ಪ್ರಶಾಂತ್ ಕುಮಾರ್ ಮತ್ತು ರುಚಿ ಶಾಂಡಿಲ್ಯ ಪ್ರೀತಿಸಿ ಮದುವೆ(2008)ಯಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಆತ ಇವಳೊಂದಿಗೆ ಜಗಳ ಕಾಯುತ್ತಿದ್ದ. ಇಷ್ಟವಿಲ್ಲದಂತೆ ವರ್ತಿಸುತ್ತಿದ್ದ. ಪದೇ ಪದೇ ಡೈವೋರ್ಸ್ ನೀಡಲು ಒಪ್ಪಿಗೆ ನೀಡುವಂತೆ ಒತ್ತಾಯಿಸುತ್ತಿದ್ದ. ಇದರಿಂದ ನೊಂದ ರುಚಿ ಶಾಂಡಿಲ್ಯ ಮೊನ್ನೆ ಭಾನುವಾರ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಗಂಡನಿಗೆ,
ಅತ್ತೆ ಮಾವನಿಗೆ ಮತ್ತು ತನ್ನ ತಂದೆಗೆ ಸೇರಿದಂತೆ ಪ್ರತ್ಯೇಕವಾಗಿ ಮೂರು ಡೆತ್ ನೋಟ್ ಬರೆದಿದ್ದಳು. ಇದರಲ್ಲಿ ಪ್ರಶಾಂತ್ ಕುಮಾರ್ ತಂದೆತಾಯಿಗೆ ಬರೆದ ಪತ್ರದಲ್ಲಿ ಅವರ ವಿರುದ್ಧ ಕಿಡಿಕಾರಿದ್ದಾಳೆ. ಗಂಡ ಡೈವೋರ್ಸ್ ನೀಡುವಂತೆ ಪೀಡಿಸುತ್ತಿದ್ದಾಗ ನೆರವಿಗೆ ಬಾರದ ನೀವು ಹೃದಯ ಹೀನರು ಎಂದು ಬರೆಯಲಾಗಿದೆ. ರುಚಿ ಶಾಂಡಿಲ್ಯ ಆತ್ಮಹತ್ಯೆ ಕುರಿತು ಹಲಸೂರು ಪೋಲಿಸರು ತನಿಖೆ ಆರಂಭಿಸಿದ್ದಾರೆ.











Click it and Unblock the Notifications