ಅತ್ಯಾಚಾರ ಯತ್ನ: ಐಎಂಎಫ್ ಮುಖ್ಯಸ್ಥನ ಬಂಧನ

ಶನಿವಾರ ಮ್ಯಾನ್‌ಹಟನ್ ಟೈಮ್ಸ್ ವೃತ್ತ ಸಮೀಪದ ನ್ಯೂಯಾರ್ಕ್ ಹೋಟೆಲ್ ನಲ್ಲಿ ಡೊಮಿನಿಕ್ ಸ್ಟ್ರಾಸ್ ಕ್ಹಾನ್ ತಂಗಿದ್ದರು. ಆ ಸಮಯದಲ್ಲಿ ಕೊಠಡಿಯನ್ನು ಸ್ವಚ್ಛ ಮಾಡಲೆಂದು ಬಂದ ಕೆಲಸದಾಕೆಯನ್ನು , ಸ್ನಾನ ಮಾಡುತ್ತಿರುವಲ್ಲಿಂದ ನಗ್ನರಾಗಿಯೇ ಹೊರಬಂದು ತಬ್ಬಿಕೊಂಡರು. "ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡಲಿಲ್ಲ" ಎಂದು 32 ವರ್ಷದ ಹೋಟೆಲ್ ಕೆಲಸದಾಕೆ ಪೋಲಿಸರಿಗೆ ದೂರು ನೀಡಿದ್ದಾರೆ.
ಮುಖವನ್ನು ಒಂದೇ ಸಮನೆ ಚುಂಬಿಸಿದ ಆತ ಬೆಡ್ ರೂಮಿಗೆ ಎಳೆದೊಯ್ಯಲು ಯತ್ನಿಸಿದರು. ನಂತರ ಅತ್ಯಾಚಾರ ಮಾಡಲು ಯತ್ನಿಸಿದರು ಎಂದು ಆಕೆ ಪೋಲಿಸರಿಗೆ ತಿಳಿಸಿದ್ದಾರೆ.. ಅವರಿಂದ ತಪ್ಪಿಸಿಕೊಂಡ ಆಕೆ ಸೀದಾ ಹೋಟೆಲ್ ಆಡಳಿತದವರಿಗೆ ಸುದ್ದಿ ಮುಟ್ಟಿಸಿದರು. ಅವರು ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಪೋಲಿಸರು ಬರುವ ವೇಳೆಗೆ ಮೊಬೈಲ್ ಇತ್ಯಾದಿಗಳನ್ನು ಬಿಟ್ಟು ಕ್ಹಾನ್ ಪರಾರಿಯಾಗಿದ್ದರು. ನಂತರ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಯಿತು. ಸಣ್ಣಪುಟ್ಟ ಗಾಯವಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಸರಿಯಾದ ತನಿಖೆ ನಡೆಸಲಾಗುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ.
ಇಂತಹ ಕೃತ್ಯ ನಡೆಸಿರುವುದು ಇವರು ಇದೇ ಮೊದಲಲ್ಲ. ಐಎಂಎಫ್ ಉದ್ಯೋಗಿಯಾಗಿದ್ದ ಹಂಗೇರಿಯದ ಆರ್ಥಿಕ ತಜ್ಞೆಯೊಬ್ಬಾಕೆಯ ಮೇಲೂ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪ ಇವರ ಮೇಲಿತ್ತು. ಆಮೇಲೆ ನಡೆದ ತನಿಖೆಯಲ್ಲಿ ಇದು ಪರಿಸ್ಪರ ಒಪ್ಪಿ ನಡೆದ ಸಂಬಂಧ ಎಂದು ಬಹಿರಂಗಗೊಂಡಿತ್ತು.












Click it and Unblock the Notifications