ಅವರು ವಯಾಗ್ರ ಬಳಸುತ್ತಿದ್ದರು ಎಂದಳು ಲಾಡೆನ್ ಪತ್ನಿ

ನ್ಯೂಯಾರ್ಕ್ ಸಿಟಿ ಡೈಲಿ ವರದಿಯಲ್ಲಿ ಲಾಡೆನ್ ಪತ್ನಿ "ಅಮಲ್ ಆಲ್ ಸದಹ" ಹೇಳಿಕೆ ಹೊರಬಿದ್ದಿದೆ. ಕಿಲ್ ಒಸಾಮಾ ಕಾರ್ಯಚರಣೆ ಸಂದರ್ಭ ಈಕೆಯ ಕಾಲಿಗೆ ಗುಂಡು ತಗುಲಿತ್ತು. "ಒಸಾಮಾನಿಗೆ ವಯಾಗ್ರದ ಅವಶ್ಯಕತೆಯಿತ್ತು. ನಿಯಮಿತವಾಗಿ ಸೇವಿಸುತ್ತಿದ್ದರು. ಆದರೆ ಅವರಿಗೆ ಯಾವುದೇ ಕಿಡ್ನಿ ಸಂಬಂಧಿತ ಸಮಸ್ಯೆಗಳಿರಲಿಲ್ಲ" ಎಂದು ಲಾಡೆನ್ ನ ಐದನೇಯ ಪತ್ನಿ ಹೇಳಿದ್ದಾಳೆ. ಆತ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದಾಗಿ ಈ ಹಿಂದೆ ರೂಮರ್ ಹಬ್ಬಿತ್ತು.
ಈ ಡೈಲಿ ಇನ್ನೊಂದು ಅಂಶವನ್ನು ಬಹಿರಂಗಪಡಿಸಿದೆ. ಅದೆಂದರೆ ಲಾಡೆನ್ ಗಿರುವ ಪಿಂಕ್ ಲೇಡಿ ಮೋಹ. ಯಾರಪ್ಪ ಇವಳು ಪಿಂಕ್ ಲೇಡಿ ಅಂತ ಕೇಳಬೇಡಿ. ನೈಸರ್ಗಿಕ ಹಣ್ಣು ಕಲ್ಲಂಗಡಿ ಹಣ್ಣೇ ಈ ಪಿಂಕ್ ಹೆಣ್ಣು. ಆತ ಹೆಚ್ಚು ಹೆಚ್ಚು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದನಂತೆ! ಪಿಂಕ್‌ಲೇಡಿ ಕುಡಿದು ನೋಡಿ! ಮಜಾನೇ ಬೇರೆ ಅಂತ ಕೆಲವರು ಹೇಳುತ್ತಾರೆ. ಹೆಚ್ಚಿನ ವೈಯಾಗ್ರ ತಯಾರಿಸಲೂ ಕಲ್ಲಂಗಡಿ ಹಣ್ಣು ಬೇಕು. ಉಗ್ರ ಲಾಡೆನ್ ಗೆ ವಯಾಗ್ರವೂ ಬೇಕು. ಕಲ್ಲಂಗಡಿಯೂ ಬೇಕು!
ಲಾಡೆನ್ ಗೆ ಒಟ್ಟು 5 ಮಂದಿ ಪತ್ನಿಯರು. ಅದರಲ್ಲಿ ಮೊದಲ ಪತ್ನಿಯ ಹೆಸರು ನಾಜ್ವಾ ಘಾನೆಮ್. ಇವಳಿಗೆ ಹನ್ನೆರಡು ಮಕ್ಕಳು. ಅದರಲ್ಲಿ ಮೊದಲ ಮಗನ ಹೆಸರು ಅಬ್ದುಲ್ಲಾ ಲಾಡೆನ್. ಕೊನೆಯ ಮಗಳ ಹೆಸರು ನೂರ್ ಬಿನ್ ಲಾಡೆನ್. ಎರಡನೇ ಹೆಂಡತಿಯ ಹೆಸರು ಖತೀಜಾ ಶರೀಪ್. ಇವಳಿಗೆ ಮೂರು ಮಕ್ಕಳು. ಆಲಿ ಬಿನ್ ಲಾಡೆನ್, ಅಮಿರ್ ಬಿನ್ ಲಾಡೆನ್ ಮತ್ತು ಅಯಿಸಾ ಬಿನ್ ಲಾಡೆನ್ ಅಂತ ಖತೀಜಾ ಮಕ್ಕಳ ಹೆಸರು. ಮೂರನೇ ಪತ್ನಿಯ ಹೆಸರು ಖೈರಾಹಾ ಸಬಾರ್(1989–2011). ಇವಳಿಗೊಬ್ಬ ಮಗನಿದ್ದಾನೆ ಆತನ ಹೆಸರು ಹಂಝಾ ಬಿನ್ ಲಾಡೆನ್.
ಒಸಾಮನ ನಾಲ್ಕನೇ ಪತ್ನಿಯ ಹೆಸರು ಸಿಹಾಮ್ ಸಬಾರ್. ಇವಳಿಗೆ ಆರು ಮಂದಿ ಮಕ್ಕಳು. ಲಾಡೆನ್ ಐದನೇ ಪತ್ನಿಯ ಹೆಸರು ಅಮಲ್ ಆಲ್-ಸದಾಹ. ಇವಳಿಗೆ 2001ರಲ್ಲಿ ಒಬ್ಬ ಮಗ ಹುಟ್ಟಿದ್ದಾನೆ. ಹೀಗೆ ಲಾಡೆನ್ 5 ಪತ್ನಿಯರ ಗಂಡ ಮತ್ತು ಇಪ್ಪತ್ತು ಮಕ್ಕಳಿಗೆ ಅಪ್ಪ.
ಒಸಾಮಾ ಬಿನ್ ಲಾಡೆನ್ ನನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡುವಾಗ ಬದುಕುಳಿದ ಅವನ ಮೂವರು ಪತ್ನಿಯರನ್ನು ತನಗೊಪ್ಪಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಈ ಹಿಂದೆ ತಾಕೀತು ಮಾಡಿತ್ತು.












Click it and Unblock the Notifications