ಇವಳು ಲಾಡೆನ್ ಅಣ್ಣನ ಮಗಳು, ಮಾಡೆಲ್ ವಫಾ ಡಫೂರ್ !

ಒಬಿಎಲ್ ನ ಸೋದರ ಯೆಸಲೀಮ್ ಎಂಬುವವನ ಮಗಳೇ ಈ ಬಿನ್ನಾಣಗಿತ್ತಿ ವಫಾ. ಅಂದಹಾಗೆ ಒಬಿಎಲ್ ಯಾವ ನಗರದಲ್ಲಿ ಅವಳಿ ಕಟ್ಟಡಗಳಿಗೆ ವಿಮಾನಗಳನ್ನು ನುಗ್ಗಿಸಿ, ಅಮೆರಿಕನ್ನರ ಪ್ರತಿಷ್ಠೆಗೆ ಪೆಟ್ಟುಕೊಟ್ಟಿದ್ದನೋ ಅದೇ ಮಹಾನಗರ (ನ್ಯೂಯಾರ್ಕ್) ಇವಳ ತವರು. ಜೆಡ್ಡಾದಲ್ಲಿ ಹುಟ್ಟು ಪಡೆದ ವಫಾ, 10 ವರ್ಷದವಳಾಗಿದ್ದಾಗ ಅವಳಮ್ಮ ತನ್ನ ಗಂಡನನ್ನು ಬಿಟ್ಟು ಸ್ವಿಟ್ಸರ್ಲೆಂಡ್ ಗೆ ಹೊರಟುಹೋದಳು. ವಫಾ ಅಮ್ಮನ ಹಿಂದೆ ಹೆಜ್ಜೆ ಹಾಕಿದಳು.
2001ರ ಸೆಪ್ಟೆಂಬರ್ 11ರಂದು ಡಬ್ಲ್ಯುಟಿಸಿ ಕೇಂದ್ರ ಧರೆಗುರುಳುತ್ತಿದ್ದಂತೆ ವಫಾ ಭೋರಿಟ್ಟಿದ್ದಳು. ಎಲ್ಲ ಅಮೆರಿಕನ್ನರಂತೆ ಸಹಜವಾಗಿಯೇ 'ಯಾವೋನು ... ಇಂತಹ ಮಾನಗೇಡಿ ಕೆಲಸ ಮಾಡಿರುವುದು' ಎಂದು ಕಿರುಚಾಡಿದ್ದಳು. ಸ್ವತಃ ತನ್ನ ಚಿಕ್ಕಪ್ಪನದೇ ಈ ಕುಕೃತ್ಯ ಎಂದಾಗ ಇವಳು ಮಾಡಿದ ಮೊದಲ ಕೆಲಸವೆಂದರೆ ತನ್ನ ಹೆಸರಿಗೆ ಅಂಟಿಕೊಂಡಿದ್ದ ಲಾಡೆನ್ ಎಂಬ ಬಾಲಂಗೋಚಿಯನ್ನು ಕಿತ್ತು ಹಾಕಿದ್ದು. ತನ್ನ ಅಮ್ಮನ ಹೆಸರಷ್ಟೇ ತನಗಿರಲಿ ಎಂದು ಘೋಷಿಸಿದಳು.
ದಾಳಿ ನಡೆದಾಗ ವಫಾ ಜಿನಿವಾದಲ್ಲಿ ಅಮ್ಮನೊಂದಿಗೆ ಇದ್ದಳು. ಘಟನೆಯ ಬಳಿಕ ಎಷ್ಟು ಅಧೀರಳಾಗಿದ್ದಳೆಂದರೆ ಆರು ತಿಂಗಳ ಕಾಲ ಅವಳನ್ನು ಮನೋವ್ಯಾಕುಲತೆ ಕಾಡಿತ್ತು. ಮುಂದೆ ಎಂದಿಗೂ, ಎಲ್ಲೂ ಅಪ್ಪಿತಪ್ಪಿಯೂ ತಾನು ಒಬಿಎಲ್ ನ ಮಗಳು ಎಂದು ಹೇಳಿಕೊಳ್ಳಲಿಲ್ಲ. ಲಾಡೆನ್ ಕುಟುಂಬದ ಬಗ್ಗೆ ಎಳ್ಳಷ್ಟೂ ಹೆಮ್ಮೆ ಇಲ್ಲ ಎಂದಳು.
ಮುಂದ... ಅಮೆರಿಕದ ಪ್ರಮುಖ ಮ್ಯಾಗಜೀನ್ ಗೆ ಲ್ಯಾಂಝೆರಿ ಉಡುಗೆಯಲ್ಲಿ ತನ್ನ ಸೊಬಗನ್ನು ಭರಪೂರ ತೆರೆದಿಟ್ಟಳು. ಈಜುಡುಗೆ ಇವಳಿಗೆ ಬಲು ಅಚ್ಚುಮೆಚ್ಚು. ಅಲ್ಲಿಂದ ಮುಂದಕ್ಕೆ ಅದೇ ಅವಳ ವೃತ್ತಿ ಜೀವನವಾಯಿತು. ಯಾವುದೇ ಎಗ್ಗಿಲ್ಲದೆ ದೇಹ ಪ್ರದರ್ಶನಕ್ಕಿಳಿದಳು. ಇದೇ ವೇಳೆ ಒಬಿಎಲ್ ನಿಂದ ಶಾಶ್ವತವಾಗಿ ದೂರವಾಗತೊಡಗಿದಳು.












Click it and Unblock the Notifications