ಪ್ರೇಯಸಿಯನ್ನು ಕಾಲೇಜಿನಲ್ಲೇ ಹೂತು ಹಾಕಿದ ಅಟೆಂಡರ್

ಕಾಲೇಜಿನ ಅಟೆಂಡರ್ ಯು. ರಾಜು 25 ವರ್ಷ ವಯಸ್ಸಿನ ಸಾರಿಕಾಳ ಪಾಗಲ್ ಪ್ರೇಮಿಯಾಗಿದ್ದ. ಕಳೆದ ಡಿಸೆಂಬರ್ ನಲ್ಲಿ ಇದೇ ಕಾಲೇಜಿನಲ್ಲಿ ಬಿ. ಎಡ್ ಮುಗಿಸಿದ್ದ ಸಾರಿಕಾ, ಮನೆಯವರು ನಿಶ್ಚಯಿಸಿದ್ದ ಹುಡುಗನನ್ನು ವರಿಸಲು ಸಜ್ಜಾಗುತ್ತಿದ್ದಳು. ರಾಜುಗೆ ಇದು ವಿಪರೀತ ವರಿಯಾಗಿ ಕಾಡತೊಡಗಿದೆ. ಸರಿ ತಡಮಾಡದೆ ಮೇ 1ರಂದು ಅವಳಿಗೆ ಸಾವಿಗೆ ಮಹೂರ್ತವಿಟ್ಟ.
ಇತ್ತ ಸಾರಿಕಾಳ ಅಪ್ಪ, ಅಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ಅವಲತ್ತುಕೊಂಡರು. ಕಾರ್ಯಾಚರಣೆಗಿಳಿದ ಪೊಲೀಸರು ಬಲಿಪಶುವಾಗಿದ್ದ ಸಾರಿಕಾಳ ಮೊಬೈಲ್ ಫೋನ್ ಗೆ ಕಿವಿಗೊಟ್ಟರು. ಕಾಲ್ ಡೀಟೆಲ್ಸ್ ನೋಡಿದಾಗ ರಾಜುವಿನಿಂದ (ಸಾವಿನ) ಕರೆ ಬಂದಿರುವುದು ದೃಢಪಟ್ಟಿದೆ. ಬಂಧನದ ವೇಳೆ ರಾಜು ತನ್ನ ಪ್ರೇಮ ಪುರಾಣ ಬಿಚ್ಚಿಟ್ಟಿದ್ದಾನೆ.
'ಸಾರಿಕಾಳನ್ನು ಪ್ರೀತಿಸುತ್ತಿದ್ದೆ. ಮನೆಯವರು ತನಗೆ ಮದುವೆ ಮಾಡುತ್ತಿರುವುದಾಗಿ ಸಾರಿಕಾ ಹೇಳಿದಳು. ಇದರಿಂದ ಕುಪಿತನಾಗಿ ಅವಳ ಕತ್ತು ಹಿಸುಕಿ ಸಾಯಿಸಿಬಿಟ್ಟೆ ಎಂದು ರಾಜು ಒಪ್ಪಿಕೊಂಡಿದ್ದಾನೆ. ಶವವನ್ನು ಕಾಲೇಜು ಕ್ಯಾಂಪಸ್ ನಲ್ಲೇ ಹೂತಿರುವುದನ್ನು ರಾಜು ತಿಳಿಸಿದ. ಪೊಲೀಸರು ಸ್ಥಳವನ್ನು ಪರಿಶೀಲಿಸಿ, ಹೂತಿಟ್ಟ ಶವವನ್ನು ಹೊರತೆಗೆದು ಪೋಷಕರಿಗೆ ಒಪ್ಪಿಸಿದ್ದಾರೆ. ಪೋಷಕರ ಗೋಳು ಮುಗಿಲು ಮುಟ್ಟಿದೆ. ಅತ್ತ ರಾಜು ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications