ಸುಖ ನೀಡದ ದುಬೈ ಗಂಡನ ಮೇಲೆ ಪತ್ನಿ ದಬ್ಬಾಳಿಕೆ
ದುಬೈ,
ಮೇ 7: ಕೆಲವು ಪುರುಷರ ದೌರ್ಬಲ್ಯಗಳು ಗೊತ್ತಾಗೋದು ಮದುವೆಯ ನಂತರ. ಗಂಡ ಷಂಡನೆಂದು ಗೊತ್ತಾದ ಮೇಲೆ ತಮ್ಮ ಹಣೆಬರಹವೇ ಇಷ್ಟೆಂದು ಸುಮ್ಮನಾಗುವರೇ ಹೆಚ್ಚು. ಹೆಚ್ಚೆಂದರೆ ಕೈಲಾಗದವನು, ಷಂಡ ಅಂತ ಕೋಪದಿಂದ ಬೈದು ಕೋಪ ತೀರಿಸಿಕೊಳ್ಳಬಹುದು. ಅಸಮರ್ಥ ಗಂಡನಿದ್ದರೆ ಅನೈತಿಕ ಸಂಬಂಧಗಳು ಬೆಳೆಯಬಹುದು. ಆದರೆ ದುಬೈನಲ್ಲಿ ಅಪರೂಪವಾದ ಘಟನೆಯೊಂದು ನಡೆದಿದೆ. ತನ್ನ ಷಂಡ ಗಂಡನ ವಿರುದ್ಧ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಲೇರಿದ್ದಾಳೆ. id="toptextpromo">"ತನ್ನ
ಗಂಡ ನನಗೆ ಸರಿಯಾಗಿ ಲೈಂಗಿಕ ಸುಖ ನೀಡುತ್ತಿಲ್ಲ. ಇಂತಹ ಷಂಡನಿಂದ ನಾನು ನನ್ನ ಹಕ್ಕಿನಿಂದ ವಂಚಿತಳಾಗಿದ್ದೇನೆ ಮತ್ತು ಮಾನಸಿಕ ಯಾತನೆ ಪಡುತ್ತಿದ್ದೇನೆ. ಇದಕ್ಕೆ ಆತನಿಂದ ನನಗೆ 12 ದಶಲಕ್ಷ ಡಾಲರ್ (ಸುಮಾರು 53 ಕೋಟಿ ರೂ.) ಪರಿಹಾರ ದೊರಕಿಸಿ" ಎಂದು ಆ ಮಹಿಳೆ ದುಬೈ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣವನ್ನು ದುಬೈ ಕೋರ್ಟ್ ಸದ್ಯದಲ್ಲಿಯೇ ವಿಚಾರಣೆ ನಡೆಸಲಿದೆ. ಆಕೆಯ ಸಾಮಾಜಿಕ ಬದುಕಿಗೆ ತೊಂದರೆಯಾಗದಂತೆ ಆಕೆಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲವಂತೆ. id='are-slot-1' class='oiad oi-axt oiadv'> id='top-searched-articles'>"ನಾನು
ಆತನನ್ನು 2008ರಲ್ಲಿ ಮದುವೆಯಾದೆ. ಆತ ಇಲ್ಲಿವರೆಗೆ ನಾಲ್ಕು ತಿಂಗಳು ಕೂಡ ನನ್ನೊಂದಿಗೆ ಮಲಗಿಲ್ಲ. ಆಮೇಲೆ ಆತನಿಗೆ ಲೈಂಗಿಕ ನಿಶಕ್ತಿ ಇರುವುದು ಅರಿವಾಯ್ತು. ಅರಬ್ ನಲ್ಲಿರುವ ಮಹಿಳೆಯಾಗಿ ನಾನು ಇಷ್ಟು ದಿನಗಳ ಕಾಲ ಸುಮ್ಮನಿದ್ದೆ. ಮುಂದೆಯಾದರೂ ಪರಿಸ್ಥಿತಿ ಸರಿಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಆದರೆ ನಾನು ತುಂಬಾ ಮಾನಸಿಕ ಯಾತನೆ ಪಡುವಂತಾಗಿದೆ. ಇದಕ್ಕೆ ಕಾರಣನಾದ ಆತನಿಂದ ನನಗೆ ಪರಿಹಾರ ದೊರಕಿಸಿ" ಎಂದು ಆಕೆ ಕೋರ್ಟ್ ನಲ್ಲಿ ತನ್ನ ದುಃಖ ತೋಡಿಕೊಂಡಿದ್ದಾಳೆ ಎಂದು ವರದಿ ಹೇಳಿದೆ.











Click it and Unblock the Notifications