ಮೇ 10ರಂದು ಎರಡನೇ ಪಿಯುಸಿ ಪರೀಕ್ಷೆ ಫಲಿತಾಂಶ

Vishweshwar Hegde Kageri
ಕಾರವಾರ, ಮೇ. 06 : ಮಾರ್ಚ್ ತಿಂಗಳಲ್ಲಿ ನಡೆದಿದ್ದ 2011ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಮೇ 10, ಮಂಗಳವಾರದಂದು ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರವಾರದಂದು ಇಂದು ಪ್ರಕಟಿಸಿದರು.

ಮಾರ್ಚ್ 17ರಿಂದ 23ರವರೆಗೆ ನಡೆದಿದ್ದ ಎರಡನೇ ಪಿಯುಸಿ ಪರೀಕ್ಷೆಗೆ 6.24 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕುಳಿತುಕೊಂಡಿದ್ದರು. ಏ. 8ರಿಂದ ಮೌಲ್ಯ ಮಾಪನ ಶುರುವಾಗಿತ್ತು. ಮೌಲ್ಯ ಮಾಪಕರ ಯಾವುದೇ ತಂಟೆ ತಕರಾರುಗಳಿಲ್ಲದೆ ನಿಗದಿತ ಸಮಯದಲ್ಲಿ ಮೌಲ್ಯಮಾಪನ ಮುಗಿದೆ. ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏ. 29ರಂದೇ ಮುಗಿದಿದೆ.

ಮೇ 12ರಂದು ಎಸ್ಎಸ್ಎಲ್ ಸಿ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು, ಎಸ್ಎಸ್ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮೇ ಮೊದಲ ವಾರದಲ್ಲಿ ಮುಗಿಸಿ ಮೇ 15ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಕಾಗೇರಿ ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು. ಎಸ್ಎಸ್ಎಲ್ ಸಿ ಫಲಿತಾಂಶ ಕೂಡ ಮೇ 10ರ ನಂತರ ಮತ್ತು 15ರೊಳಗೆ ಯಾವುದೇ ದಿನ ಪ್ರಕಟವಾಗುವ ಸಂಭವವಿದೆ.

ಮೇ 10ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸುವುದಾಗೇನೋ ಕಾಗೇರಿಯವರು ಹೇಳಿದ್ದಾರೆ. ಆದರೆ, ಇಂಟರ್ನೆಟ್ಟಿನಲ್ಲಿ ಎಂದು ಪ್ರಕಟವಾಗುತ್ತದೆ ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಪ್ರತಿವರ್ಷ ಫಲಿತಾಂಶ ಪ್ರಕಟವಾಗುವ ಹಿಂದಿನ ದಿನ ಸಂಜೆ ಇಂಟರ್ನೆಟ್ಟಿನಲ್ಲಿ ಲಭ್ಯವಾಗುವು ಕಾರಣ ಮೇ 9ರಂದು ದಟ್ಸ್ ಕನ್ನಡ ವೆಬ್ ತಾಣವನ್ನು ವಿದ್ಯಾರ್ಥಿಗಳು ಜಾಲಾಡಿದರೆ ಉತ್ತಮ. ದಟ್ಸ್ ಕನ್ನಡ ನಿಮಗಾಗಿ ಫಲಿತಾಂಶಗಳನ್ನು ತರುತ್ತಿದೆ, ನಿರೀಕ್ಷಿಸಿ. ಆಲ್ ದಿ ಬೆಸ್ಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+