ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮೊಬೈಲ್ ನಲ್ಲಿ ಮೈಸೂರು, ಬನ್ನೇರುಘಟ್ಟ ಮೃಗಾಲಯ

|
Google Oneindia Kannada News

Bannerghatta National park
ಮೈಸೂರು, ಮೇ 5: "ಈ ಪ್ರಾಣಿಯ ಹೆಸರು ಜಿರಾಫೆ, ಇದರ ಕಾಲು ಆರು ಅಡಿಗಿಂತಲೂ ಉದ್ದವಿದೆ, ಇದರ ಕತ್ತು ಇಷ್ಟು ಎತ್ತರವಿದೆ... ಇದು ತಿನ್ನೋ ಆಹಾರ......" ಹೀಗೆ ಮೃಗಾಲಯದಲ್ಲಿ ನಾವು ಸಾಗಿದಾಗ ಅಲ್ಲಿರುವ ಪ್ರಾಣಿ ಪಕ್ಷಿಗಳ ಸಂಪೂರ್ಣ ವಿವರಗಳು ಕಾಮೆಂಟರಿ ರೂಪದಲ್ಲಿ ನಮ್ಮ ಕಿವಿಗೆ ಕೇಳಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೇ.?

ಮೈಸೂರು ಜಯಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಇಂತಹ ವಿಶೇಷ ಸೌಲಭ್ಯ ಆರಂಭವಾಗಿದೆ. ಮೃಗಾಲಯದಲ್ಲಿ ಅಡ್ಡಾಡುವಾಗ ನಿಮಗೆ ಇಷ್ಟವಾದ ಪ್ರಾಣಿಯ ಮುಂದೆ ನಿಂತು ಮೊಬೈಲ್ ಫೋನ್ ತೆರೆದರೆ ಸಾಕು. ಆ ಪ್ರಾಣಿಯ ಸಂಪೂರ್ಣ ಜಾತಕ ಕಾಮೆಂಟರಿ ರೂಪದಲ್ಲಿ ನಿಮಗೆ ಕೇಳಿಸಲಿದೆ.

ಬೋಲ್ಟ್ ಟೆಲ್ ಎಂಬ ಕಂಪನಿ ಇಂತಹ ವಿಶೇಷ ಸೌಲಭ್ಯವನ್ನು ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯದಲ್ಲಿ ಆರಂಭಿಸಿದೆ. ಪ್ರಾಣಿ ಪಕ್ಷಿಯ ಮುಂದೆ ನಿಂತು ಅದರ ಸಂಪೂರ್ಣ ಮಾಹಿತಿಯಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪಡೆಯಬಹುದಾಗಿದೆ. ಈ ಸಿಸ್ಟಮನ್ನು ಸೆಲ್ ಫೋನ್ ಗೆ ಅಳವಡಿಸುವುದು ಸುಲಭವಾಗಿದೆ.

ಇದಕ್ಕಾಗಿ ಮೃಗಾಲಯದ ಕೌಂಟರಿನಲ್ಲಿ ದೊರಕುವ ಸ್ಕಾರ್ಚ್ ಕಾರ್ಡ್ ಖರೀದಿಸಬೇಕು. ಅದರಲ್ಲಿರುವ ನಂಬರನ್ನು ನಿಮ್ಮ ಮೊಬೈಲ್ ಗೆ ದಾಖಲಿಸಿದರೆ ಈ ಸೇವೆ 6 ಗಂಟೆಗಳ ಕಾಲ ಆಕ್ಟಿವೇಟ್ ಆಗುತ್ತದೆ. ಅರ್ಧಗಂಟೆ ಮತ್ತು ಒಂದು ಗಂಟೆಯ ಸ್ಕಾರ್ಚ್ ಕಾರ್ಡ್ ಗಳ ದರ ಕ್ರಮವಾಗಿ 10 ರೂ. ಮತ್ತು 20 ರೂ. ಆಗಿದೆ. ಇದರೊಂದಿಗೆ ಸ್ಟಾಂಡರ್ಡ್ ಕರೆ ದರದಷ್ಟು ನಿಮಗೆ ವೆಚ್ಚವಾಗುತ್ತದೆ.

"ಈ ಟೈಗರ್ ಗೆ ತಿನ್ನೋಕೆ ಏನು ಹಾಕ್ತಾರೆ ಡ್ಯಾಡ್" ಅಂತ ಇನ್ನು ಮುಂದೆ ನಿಮ್ಮ ಮಕ್ಕಳು ಕೇಳಿದರೆ ಹಾರಿಕೆಯ ಉತ್ತರ ಕೊಡಬೇಕೆಂದಿಲ್ಲ. ನಿಮ್ಮ ಮೊಬೈಲ್ ಫೋನ್ ಮೂಲಕ ಎಲ್ಲ ಮಾಹಿತಿಗಳನ್ನು ಪಡೆಯಬಹುದು. ಮಕ್ಕಳ ಕಿವಿಗೂ ಮೊಬೈಲ್ ಕೊಟ್ಟು ಕಾಮೆಂಟರಿ ಕೇಳಿಸಬಹುದು.

English summary
Visitors to Sri Chamarajendra Zoological Garden Mysore and Bangalore Bannerghatta now enrich their knowledge about different animals in the enclosures through listening to a narrative audio guide on their mobile-phone. Boltell, a software company, has provided this system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X