ರಣಹೇಡಿ ಒಸಾಮಾನ ಉಯಿಲು, ಅವನ ಹುಯಿಲು

ಏಕೆಂದರೆ ಕುವೈತ್ ದಿನಪತ್ರಿಕೆ ಮಂಗಳವಾರ ಪ್ರಕಟಿಸಿರುವ 'ಲಾಡೆನ್ ವಿಲ್' ನಲ್ಲಿ 'ಅಲ್ಲಾ ಮೇಲಾಣೆ. ನನ್ನ ನಿಧನಾನಂತರ ಖಂಡಿತ ನೀವು ಮತ್ತೆ ಮದುವೆಯಾಗಬಾರದು' ಎಂದು ತನ್ನ ನಾಲ್ಕಾರು ಹೆಂಡತಿಯರಿಗೆ ಫರ್ಮಾನು ಹೊರಡಿಸಿದ್ದಾನೆ ಲಾಡೆನ್.
ಇನ್ನು, ಮಕ್ಕಳ ಬಗ್ಗೆ ಬರೆಯುತ್ತಾ 'ನಾನೇನೋ ಜಿಹಾದ್ ಗೆ ಜೀವ ಸವೆಸಿದೆ. ನಿಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಬಗ್ಗೆ ನನಗೆ ಪಶ್ಚಾತ್ತಾಪವಿದೆ. ದಯವಿಟ್ಟು ಕ್ಷಮಿಸಿ. ಆದರೆ ಎಂದಿಗೂ ನೀವು (ಅವನ ಮಕ್ಕಳು) ಜಿಹಾದ್ ನತ್ತ ತಲೆ ಹಾಕಬೇಡಿ' ಎಂದು ತನ್ನ ಹತ್ತಾರು ಮಕ್ಕಳನ್ನು ಅಂಗಾಲಾಚಿದ್ದಾನೆ ಸೈತಾನ ಒಸಾಮಾ.
ಯಾವುದೇ ತಂದೆಯಾಗಲಿ ತಾನು ಮಾಡುತ್ತಿರುವ ಕೆಲಸ ಕಾರ್ಯದಲ್ಲಿ ಎಷ್ಟೇ ಕಷ್ಟ-ನಷ್ಟ, ಸುಃಖ-ದುಃಖ ಇದ್ದರೂ ತನ್ನ ಮಕ್ಕಳೂ ಅದರಲ್ಲಿಯೇ ಹೆಸರು ಮಾಡಲಿ ಎಂದು ಸಣ್ಣ ಆಸೆ ಹೊತ್ತಿರುತ್ತಾನೆ. ಆದರೆ ಪರಮಪಾಪಿ ಒಸಾಮಾಗೆ ತನ್ನ ಮಕ್ಕಳು ಜಿಹಾದ್ ಗೆ ಸಮರ್ಪಿಸಿಕೊಳ್ಳುವುದು ಬೇಡವಾಗಿತ್ತು. ಅಂದರೆ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಹೀಲ ಕುಲದವ ಇವ.
ಲಾಡೆನ್, ನಾಲ್ಕು ಪುಟಗಳ ತನ್ನ ಉಯಿಲನ್ನು 2001ರ ಡಿಸೆಂಬರ್ 14ರಂದೇ ಬರೆದಿಟ್ಟಿದ್ದಾನೆ. 9/11ರ ದಾಳಿಯ ಮೂರು ತಿಂಗಳ ಬಳಿಕ ಅಮೆರಿಕ ಪಡೆಗಳು ಶತಾಯಗತಾಯ ತನ್ನ ಹುಟ್ಟಡಗಿಸಲು ಯತ್ನಿಸುತ್ತಿವೆ ಎಂಬುದು ಅವನ ಅರಿವಿಗೆ ಬರುತ್ತಿದ್ದಂತೆ ಜೀವಭಯಕ್ಕೆ ಸಿಲುಕಿದ್ದ ಲಾಡೆನ್ ಈ ವಿಲ್ ಬರೆದಿಟ್ಟಿದ್ದಾನೆ. ಕಂಪ್ಯೂಟರ್ ನಲ್ಲಿ ಕೀ ಮಾಡಿರುವ ಈ ವಿಲ್ ನಲ್ಲಿ ಕೊನೆಗೆ 'ನಿಮ್ಮ ಸೋದರ, ಅಬು ಅಬ್ದುಲ್ಲಾ ಒಸಾಮಾ ಮೊಹಮದ್ ಬಿನ್ ಲಾಡೆನ್' ಎಂದು ಸಹಿ ಹಾಕಿದ್ದಾನೆ.












Click it and Unblock the Notifications