ನಯಾಗರ ಪುತ್ತಿಗೆಮಠ ಶಾಲೆಗೆ ಅರ್ಜಿ ಆಹ್ವಾನ
ಉಡುಪಿ,
ಮೇ 3: ಉಡುಪಿಯ ಅಷ್ಟ ಪೀಠಗಳಲ್ಲಿ ಒಂದಾದ ಪುತ್ತಿಗೆ ಪೀಠವು ಪೌರೋಹಿತ್ಯ, ವೇದ, ಆಗಮ, ಜ್ಯೋತಿಷ್ಯ, ಅಲಂಕಾರ ಮತ್ತು ಇತರ ಧಾರ್ಮಿಕ ಶಿಕ್ಷಣದೊಂದಿಗೆ ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್ ಶಿಕ್ಷಣ ನೀಡುವುದಾಗಿ ಪ್ರಕಟಿಸಿದೆ. ಇದಕ್ಕಾಗಿ ಹತ್ತರಿಂದ ಹದಿನಾರು ವಯಸ್ಸಿನ ಮಕ್ಕಳಿಂದ ಅರ್ಜಿ ಅಹ್ವಾನಿಸಿದೆ. id="toptextpromo">ಅಮೆರಿಕಾ
ಮತ್ತು ಕೆನಡದ ಗಡಿಯಲ್ಲಿರುವ ಪ್ರಸಿದ್ಧ ನಯಾಗರ ಜಲಪಾತದ ಸಮೀಪದಲ್ಲಿರುವ ಮಠದ 'ಅಂತರ್ ರಾಷ್ಟ್ರೀಯ ಶಾಖೆ ನಯಾಗರ ಪುತ್ತಿಗೆ ವಿದ್ಯಾಪೀಠ' ಸೇರಿದಂತೆ ಉಡುಪಿ ಇನ್ಸ್ಟಿಟ್ಯೂಟ್ ನ ಎಲ್ಲಾ ಶಾಖೆಗಳಲ್ಲೂ ಐಟಿ ಮತ್ತು ವೈದಿಕ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಈ ಹೊಸ ಕೋರ್ಸ್ ಮುಂದಿನ ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ಅಂತರ್ ರಾಷ್ಟ್ರೀಯ ಶಾಖೆಗಳಲ್ಲಿ ಅನಿವಾಸಿ ಭಾರತೀಯರಿಗೆ ಈ ವಿನೂತನ ಶಿಕ್ಷಣವನ್ನು ಪಡೆಯಲು ಅವಕಾಶವಾಗಿದೆ ಎಂದು ಮಠವು ಪ್ರಕಟಣೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಕಳೆದ
26 ವರ್ಷಗಳಿಂದ ಪುತ್ತಿಗೆ ಮಠವು ವಿವಿಧ ಬಗೆಯ ಪುರೋಹಿತ ಶಿಕ್ಷಣವನ್ನು ನೀಡುತ್ತಿದೆ. ನಯಾಗರ ಪುತ್ತಿಗೆ ವಿದ್ಯಾಪೀಠವು ಜಗತ್ ಖ್ಯಾತಿಯ ನಯಾಗರ ಜಲಪಾತದ ಸಮೀಪದಲ್ಲಿದೆ. ಇದು ಕೆನಡಾದ ದಕ್ಷಿಣ ಗಡಿಗೆ ಹತ್ತಿರದಲ್ಲಿದೆ. ನಯಾಗರ ಯುನಿವರ್ಸಿಟಿಗೂ ಹತ್ತಿರದಲ್ಲಿದೆ. ಇಲ್ಲಿ ಅನಿವಾಸಿ ಭಾರತೀಯರ ಮಕ್ಕಳಿಗೆ ವೈದಿಕ ಶಿಕ್ಷಣವನ್ನು ಕಲಿಸಿಕೊಡಲಾಗುತ್ತದೆ. ಭಾರತದ ಆಯ್ದ ವಿದ್ಯಾರ್ಥಿಗಳಿಗೂ ಇಂತಹ ವಿಶ್ವದರ್ಜೆಯ ತರಗತಿಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.











Click it and Unblock the Notifications