ಒಸಾಮಾ ಮತ್ತು ಒಬಾಮಾ : ಗೊಂದಲ ಬೇಡಮ್ಮ

Obama and Osama
ಓದುವಾಗ ಅವಳಿ-ಜವಳಿಯಂತೆ ಕಂಡುಬರುವ ಒಂದೇ ತರಹದ ಹೆಸರುಗಳು ಎಂತೆಂಥ ಆವಾಂತರಗಳನ್ನು, ಎಂತೆಂಥ ಆಭಾಸಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಒಬಾಮಾ ಬಿನ್ ಲಾಡೆನ್... ಅಲ್ಲಲ್ಲ ಒಸಾಮಾ ಬಿನ್ ಲಾಡೆನ್ ಹತ್ಯಾಕಾಂಡವೇ ಸಾಕ್ಷಿ. ನಿಮಗೀಗ ಗೊತ್ತಾಗಿರಬೇಕಲ್ಲ ಎಂಥ ಆಭಾಸ ಸಂಭವಿಸಿರಬಹುದೆಂದು?

ಇಡೀ ಅಮೆರಿಕಕ್ಕೆ ಹತ್ತು ವರ್ಷಗಳಿಂದ ದುಃಸ್ವಪ್ನವಾಗಿ ಕಾಡುತ್ತಿದ್ದ ಒಸಾಮಾ ಬಿನ್ ಲಾಡೆನ್ ಹತ್ಯೆ ಅಮೆರಿಕನ್ನರಿಗೆ ತಂದಿರುವ ಸಂತಸ ಅಷ್ಟಿಷ್ಟಲ್ಲ. ಜನರು ಮಟಮಟ ಮಧ್ಯರಾತ್ರಿಯಲ್ಲೇ ಜಿಗಿದು ಕುಣಿದಾಡಿದರು, ಒಬ್ಬರನ್ನೊಬ್ಬರು ಅಪ್ಪಿ ನಲಿದಾಡಿದರು. ಹಿಗ್ಗಿನಲ್ಲಿ ಸುದ್ದಿ ಬಿತ್ತರಿಸುವ ಟಿವಿಯವರಿಗಂತೂ ಸುಗ್ಗಿಯೋ ಸುಗ್ಗಿ. ಅದೇ ಹಿಗ್ಗಿನಲ್ಲಿ ಫಾಕ್ಸ್40 ಚಾನಲ್ ಒಸಾಮಾ ಬಿನ್ ಲಾಡೆನ್ ಡೆಡ್ ಎನ್ನುವ ಬದಲು ಒಬಾಮಾ ಬಿನ್ ಲಾಡೆನ್ ಡೆಡ್ ಅಂತ ಬ್ರೇಕಿಂಗ್ ಸುದ್ದಿ ಬಿತ್ತರಿಸಿ ಪೇಚಿಗೀಡಾಗಿತ್ತು. ನಂತರ ಕಣ್ತಪ್ಪಿನಿಂದಾಗಿ ಹೀಗಾಯ್ತು ಅಂತ ಸಾರಿ ಕೂಡ ಕೇಳಿತು.

ಒಬ್ಬರು ಆಕಾಶವಾದರೆ, ಇನ್ನೊಬ್ಬರು ಪಾತಾಳ. ಆದರೂ ಹೆಸರಿನಲ್ಲಿರುವ ಸಾಮ್ಯ ಇಬ್ಬರನ್ನೂ ಒಂದುಗೂಡಿಸಿತ್ತು. ಇದು ಅಂತಹ ಪ್ರಮಾದವೇನಲ್ಲ ಬಿಡಿ. ಮಾಧ್ಯಮಗಳಲ್ಲಿ ಕಾಗುಣಿತ ತಪ್ಪಾಗುವುದು ಬಿತ್ತರವಾಗುವುದು ಅಥವಾ ಮುದ್ರಣವಾಗುವುದು ನಡೆದೇ ಇರುತ್ತದೆ. ಸಂಕ್ರಾಂತಿ ಸಮಯದಲ್ಲಿ ಖಾಸಗಿ ಚಾನಲ್ ಆಂಕರ್ ಒಬ್ಬ ಮಕರ ಸಂಕ್ರಾಂತಿ ಅನ್ನುವ ಬದಲು ಸಕರ ಮಂಕ್ರಾಂತಿ ಅಂದು ನಂತರ ನಾಲಿಗೆ ಕಚ್ಚಿಕೊಂಡಿದ್ದ.

ಬರೆಯುವವರು ಮಾತ್ರವಲ್ಲ ಓದುವವರು ಕೂಡ ಕನ್ಫ್ಯೂಸ್ ಆಗುವ ಸಾಧ್ಯತೆಗಳೂ ಇರುತ್ತವೆ. ಒಂದು ಉದಾಹರಣೆ ಹೀಗಿದೆ ನೋಡಿ. ಕುರುಬನ ರಾಣಿ ಚಿತ್ರದಲ್ಲಿ ನಟಿಸಿದ್ದ ನಟಿ ನಗ್ಮಾ ಕಾಂಗ್ರೆಸ್ ನಾಯಕರೊಂದಿಗೆ ಹರಟೆಯಲ್ಲಿ ತಲ್ಲೀನಳಾಗಿದ್ದ ಚಿತ್ರ ಇಂಟರ್ನೆಟ್ಟಿನಲ್ಲಿ ಪ್ರಕಟವಾಗಿತ್ತು. ಅದಕ್ಕೆ ಅಡಿಬರಹ ಹೀಗಿತ್ತು : ಕಾಂಗ್ರೆಸ್ ಮುಖಂಡರೊಡನೆ ಚರ್ಚೆಯಲ್ಲಿ ನಗ್ಮಾ ಮಗ್ನ! ಇದನ್ನು ಹ್ಯಾಗೆ ತಪ್ಪಾಗಿ ಓದುಗರು ಓದಿದ್ದರೆಂದು ಮತ್ತೆ ವಿವರಿಸುವುದು ಬೇಡ. ಕ್ಲಿಕ್ಸ್ ಮಾತ್ರ ಸಿಕ್ಕಾಪಟ್ಟೆ ಬಂದಿತ್ತು.

ನಮ್ಮ ಜೀವನದಲ್ಲೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಸತ್ಯಾನಂದ ಸೆಟ್ಟೇರಿದಾಗ ನಿತ್ಯಾನಂದ ಸಿಟ್ಟಾಗುವುದು, ರಮಾ ಎಂದು ಕರೆದಾಗ ರಾಮ ಓಡಿಬರುವುದು, ಪ್ರಕಾಶ ಎಂದು ಕೂಗಿದಾಗ ಪ್ರಶಾಂತ ಏನಾಯ್ತೆಂದು ಕೇಳುವುದು... ಇನ್ನು ಮರುಗುಳಿ ಅಪ್ಪಂದಿರು ತಮ್ಮ ಮಕ್ಕಳ ಹೆಸರನ್ನೇ ಅದಲುಬದಲು ಮಾಡಿ ಕರೆದಿರುತ್ತಾರೆ. ಇಂತಹ ಉದಾಹರಣೆಗಳು ಕೈಗೊಂದು ಕಾಲಿಗೊಂದು ಸಿಗುತ್ತಿರುತ್ತವೆ. ಇನ್ನು ಮತದಾರರ ಗುರುತಿನ ಚೀಟಿಗಳಲ್ಲಿ ಆಗುವ ಆವಾಂತರಗಳ ಬಗ್ಗೆ ಬರೆಯುವುದೇ ಬೇಡ. ಅವಳಿ-ಜವಳಿಗಳನ್ನು ಗುರುತು ಹಿಡಿಯುವಾಗ ಆಗುವ ಗೊಂದಲಗಳೇ ಒಂದೇ ತರಹದ ಹೆಸರು ಕರೆಯುವಾಗಲೂ ಆಗುವ ಸಾಧ್ಯತೆ ಇದ್ದೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+