ಯುಟ್ಯೂಬ್ ನಲ್ಲಿ ರಾಯಲ್ ವೆಡ್ಡಿಂಗ್ ನೋಡಿ ಆನಂದಿಸಿ
ಲಂಡನ್,
ಏ. 29 : ಈ ಶತಮಾನದ ಅದ್ಧೂರಿಯ ಮದುವೆಗೆ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಅಬ್ಬೆ ತಳಿರು ತೋರಣ, ಮಂಟಪ, ಬ್ಯಾಂಡ್ ಬಜಂತ್ರಿ ಎಲ್ಲ ರೆಡಿ ಮಾಡಿಕೊಂಡು ಸಿದ್ಧವಾಗಿದೆ. ಜಗತ್ತಿನೆಲ್ಲೆಡೆಯಿಂದ ಬಂದ 'ರಾಯಲ್' ಅತಿಥಿಗಳು, ವಂದಿ ಮಾದಿಗರು ಹೊಸ ಬಟ್ಟೆ ತೊಟ್ಟುಕೊಂಡು ಮಂಗಳ ಕಾರ್ಯಕ್ಕೆ ಸಿದ್ಧರಾಗಿದ್ದಾರೆ. ವೃತ್ತಪತ್ರಿಕೆ, ಟಿವಿ ಮಾಧ್ಯಮ, ಇಂಟರ್ನೆಟ್ ಸೇರಿದಂತೆ ಮಾಧ್ಯಮ ಮಿತ್ರರು ತಮ್ಮ ಸರಂಜಾಮುಗಳನ್ನು ಹಿಡಿದುಕೊಂಡು ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಮದುವೆ ಪ್ರಸಾರ ಮಾಡಲು ಸಜ್ಜಾಗಿದ್ದಾರೆ. id="toptextpromo">ಇಂಥ
ಲಗ್ನವನ್ನು ಕಣ್ಣಾರೆ ಕಾಣಬೇಕೆಂಬ ಹಂಬಲ ಯಾರಿಗಿರಲ್ಲ? ಈ ವೈಭವೋಪೇತ ಮದುವೆಯನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಆಮಂತ್ರಣವಿರಬೇಕಲ್ಲ. ಬಿಬಿಸಿ ತನ್ನ ವೆಬ್ ಸೈಟನ್ನು ಈ ಮದುವೆಗೆಂದೇ ಮೀಸಲಿಟ್ಟಿದೆ. ಸಿಎನ್ಎನ್.ಕಾಂ ಮತ್ತು ಈ ಆನ್ ಲೈನ್ ಗಳು ಕೇಂಬ್ರಿಜ್ ಡ್ಯೂಕ್ ಮತ್ತು ಡಚೆಸ್ ಆಗಲಿರುವ ವಿಲಿಯಂ ಮತ್ತು ಕೇಟ್ ಸತಿಪತಿಗಳಾದ ಕ್ಷಣಗಳನ್ನು ನೇರವಾಗಿ ಬಿತ್ತರಿಸುತ್ತಿವೆ. ನಾವು ಎಲ್ಲೋ ಇರುತ್ತೇವೆ ಇದನ್ನೆಲ್ಲಾ ನೋಡಲು ಹೇಗೆ ಸಾಧ್ಯ ಎಂದು ಚಿಂತಿಸುವ ಅಗತ್ಯವಿಲ್ಲ. id='are-slot-1' class='oiad oi-axt oiadv'> id='top-searched-articles'>ಕೈಯಲ್ಲಿ
ಯುಟ್ಯೂಬ್ ನೋಡಲು ಸಾಧ್ಯವಿರುವಂಥ ಮೊಬೈಲ್ ಇದ್ದರೆ ಸಾಕು ಕಚೇರಿಯಲ್ಲೇ ಇರಲಿ, ರಸ್ತೆಯಲ್ಲೇ ಇರಲಿ ಮದುವೆ ರಸನಿಮಿಷಗಳನ್ನು ನೋಡಿ ನಲಿದಾಡಬಹುದು. ಒಂದು ಅಂದಾಜಿನ ಪ್ರಕಾರ 20 ಲಕ್ಷ ಜನ ಟಿವಿಯಲ್ಲಿ ನೇರವಾಗಿ ಈ ಮದುವೆಯನ್ನು ವೀಕ್ಷಿಸಲಿದ್ದಾರೆ. ಇಂಟರ್ನೆಟ್ಟಿನಲ್ಲಿ 4 ಸಾವಿರ ಲಕ್ಷ ಜನ ಇಂಟರ್ನೆಟ್ಟಿನಲ್ಲಿ ವೀಕ್ಷಿಸಲಿದ್ದಾರೆ. ಇವರಲ್ಲಿ ನೀವೂ ಒಬ್ಬರಾಗಿರಿ. ಇದನ್ನೆಲ್ಲ ಸಾಧ್ಯವಾಗಿಸಿದ ತಂತ್ರಜ್ಞಾನಕ್ಕೊಂದು ಧನ್ಯವಾದ.ಅಬ್ಬೆಯಲ್ಲಿ
ಟ್ವಿಟ್ಟರ್
ಚಿಲಿಪಿಲಿ
ಇಲ್ಲ
:
ವೆಸ್ಟ್
ಮಿನಿಸ್ಟರ್
ಅಬ್ಬೆಯಲ್ಲಿ
ಟ್ವಿಟ್ಟರ್
ಚಿಲಿಪಿಲಿಗೆ
ಅವಕಾಶವೇ
ಇಲ್ಲ.
ಸಿಗ್ನಲ್-ಬ್ಲಾಕಿಂಗ್
ಟೆಕ್ನಾಲಜಿ
ಬಳಸಿ
ವೆಸ್ಟ್
ಮಿನಿಸ್ಟರ್
ಅಬ್ಬೆಯಲ್ಲಿ
ಟ್ವಿಟ್ಟರನ್ನು
ನಿರ್ಬಂಧಿಸಲಾಗಿದೆ.
ರಾಯಲ್
ಕುಟುಂಬದವರ
ಅಣತಿಯಂತೆ
ಈ
ಕ್ರಮ
ತೆಗೆದುಕೊಳ್ಳಲಾಗಿದೆ.
ಟ್ವಿಟ್ಟರ್
ಮಾತ್ರವಲ್ಲ
ಮೊಬೈಲ್
ರಿಂಗ್
ಟೋನ್
ಮತ್ತು
ಎಲ್ಲ
ಕರೆಗಳನ್ನು
ಕೂಡ
ನಿಷೇಧಿಸಲಾಗಿದೆ.
ಹಾಗಾಗಿ,
ವೆಸ್ಟ್
ಮಿನಿಸ್ಟರ್
ಅಬ್ಬೆಯ
ಒಳಗಡೆ
ಮೊಬೈಲೇ
ಸದ್ದಡಗಿಸಲಾಗಿದೆ,
ಆದರೆ
ಹೊರಗಡೆಯೆಲ್ಲ
ಬರೀ
ಅದರದೇ
ಸದ್ದು.












Click it and Unblock the Notifications