ಶೋಕಿಲಾಲಾ ಗಡಾಫಿ ಸೈನಿಕರಿಂದ ಲೈಂಗಿಕ ಹಿಂಸಾಚಾರ
ಟ್ರಿಪೋಲಿ,
ಏ. 26: ಶೋಕಿಲಾಲಾ ಕರ್ನಲ್ ಮೊಮ್ಮರ್ ಗಡಾಫಿ ಸೇನಾಪಡೆಗಳು ಸರಕಾರದ ವಿರುದ್ಧ ನಡೆಯುತ್ತಿರುವ ಬಂಡಾಯವನ್ನು ಹತ್ತಿಕ್ಕಲು ಮಕ್ಕಳು, ಮಹಿಳೆಯರ ಮೇಲೆ ರಾಕ್ಷಸರಂತೆ ಮುಗಿಬೀಳುತ್ತಿದ್ದಾರೆ. ಈ 'ಸತ್ಕಾರ್ಯ'ದಲ್ಲಿ ತಮ್ಮ ಬಾವು ಹಾರಿಸಲು ವಯಾಗ್ರ ಅಸ್ತ್ರವನ್ನು ಯಾವುದೇ ಎಗ್ಗಿಲ್ಲದೆ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. id="toptextpromo">ವಯಾಗ್ರಾ
ಭರಿತ ಸೈನಿಕರು ವ್ಯಾಪಕವಾಗಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿದ್ದಾರೆ. ಯುವತಿಯರ ಅಪಹರಣ ಅವ್ಯಾಹತವಾಗಿ ನಡೆದಿದೆ. ಮಕ್ಕಳೂ ಇದಕ್ಕೆ ಬಲಿಯಾಗುತ್ತಿದ್ದು, ಭಯಭೀತರಾಗಿದ್ದಾರೆ. ಅಪ್ಪಂದಿರನ್ನು ಸಾಯಿಸಿ, ಅವರ ತಾಯಂದಿರ ಮೇಲೆ ಮೃಗಗಳಂತೆ ಅತ್ಯಾಚಾರ ನಡೆಸುತ್ತಿದ್ದಾರೆ. ಇದಕ್ಕಾಗಿ ವಯಾಗ್ರಾ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಲಿಬಿಯಾ ದೇಶದ ಮಿಸ್ರತಾ, ಅಜ್ಡಾಬಿಯಾ ರುಸ್ಲಾನುಫ್ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>'ಚೆಕ್
ಪಾಯಿಂಟ್ ಒಂದರಲ್ಲಿ ನನ್ನನ್ನು 15 ಮಂದಿ ಸಮವಸ್ತ್ರಧಾರಿಗಳು ಅಪಹರಿಸಿದರು. ಎರಡು ದಿನಗಳ ಕಾಲ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಪತ್ರಕರ್ತರಿಗೆ ಇದನ್ನು ವಿವರಿಸುವಾಗ ಮತ್ತೆ ನನ್ನನ್ನು ಬಂಧಿಸಿದರು. ನನ್ನ ಮೇಲೆ ದೇಶದ್ರೋಹದ ಆರೋಪವನ್ನೂ ಹೊರಿಸಿದರು' ಎಂದು 28 ವರ್ಷದ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ.











Click it and Unblock the Notifications