ತಿಹಾರ್ ಜೈಲಿನಲ್ಲಿ ರಾಜಾನ ಜೊತೆ ಕನ್ನಿಮೋಳಿ?

ಇಂದು ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ಕಲೈಂಗರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಕರೀಮ್ ಮೊರಾನಿ ಹಾಗೂ ಆಸಿಫ್ ಬಾಲ್ವಾ ಸೇರಿದ್ದಾರೆ. ಆದರೆ, ಕರುಣಾನಿಧಿ ಅವರ ಧರ್ಮಪತ್ನಿ ದಯಾಳು ಅಮ್ಮಲ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದ್ದು, ಕುತೂಹಲದ ಕ್ರಮವಾಗಿದೆ. ಕಲೈಂಗರ್ ಟಿವಿಯಲ್ಲಿ ಅಮ್ಮಳ್ ಅವರಿಗೆ ಶೇ.60 ರಷ್ಟು ಷೇರುಗಳಿವೆ. ಕನ್ನಿಮೊಳಿ ಹಾಗೂ ಶರತ್ ಕುಮಾರ್ ಬಳಿ ತಲಾ ಶೇ.20 ರಷ್ಟು ಷೇರುಗಳಿವೆ.
ವಿಡಿಯೋ: ಕರುಣಾ ಪತ್ನಿಗೆ ದಯೆ, ಪುತ್ರಿಗೆ ಸಮನ್ಸ್
ಶಹೀದ್ ಉಸ್ಮಾನ್ ಬಾಲ್ವಾರ ಸ್ವ್ಯಾನ್ ಟೆಲಿಕಾಂನಿಂದ ಸುಮಾರು 200 ಕೋಟಿ ಲಂಚ ಪಡೆದ ಕಲೈಂಗರ್ ಟಿವಿ ನಿರ್ದೇಶಕಿ ಕನ್ನಿಮೋಳಿ ಅದನ್ನು ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರಿಗೆ ತಲುಪಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಕುಸೆಗಾವ್ ಫ್ರುಟ್ ಅಂಡ್ ವೆಜಿಟೆಬಲ್ಸ್ ಹಾಗೂ ಸಿನಿಯುಗ್ ಪ್ರೈ.ಲಿ ಮೂಲಕ ಕಲೈಂಗರ್ ಟಿವಿ ಸಂಸ್ಥೆ ತಲುಪಿದ ಹಣವನ್ನು ರಾಜಾಗೆ ನೀಡಿಲಾಗಿತ್ತು ಎಂದು ಸಿಬಿಐ ಆರೋಪ ಹೊರೆಸಿದೆ. ತಮಿಳುನಾಡು ಚುನಾವಣೆ ಮುಗಿಸಿ ಫಲಿತಾಂಶ(ಮೇ.13)ಕ್ಕಾಗಿ ಕಾದಿರುವ ಕರುಣಾನಿಧಿ ಇದು ಆಘಾತ ತಂದಿದೆಯಾದರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications