ಇನ್ಫಿ ಪೈ ಬೆಂಗಳೂರು ವಿವಿಗೆ ಸೇರ್ಪಡೆ?
ಬೆಂಗಳೂರು,
ಏ. 22: ಇನ್ಫೋಸಿಸ್ ತೊರೆದ ಒಂದು ವಾರದಲ್ಲೇ ಟಿ.ವಿ. ಮೋಹನದಾಸ್ ಪೈ ಕೆಲಸ ಹುಡುಕಿಕೊಂಡಿದ್ದಾರೆ. ಅಲ್ಲಲ್ಲ, ಉದ್ಯೋಗ ಎಂಬುದು ಅವರನ್ನೇ ಹುಡುಕಿಕೊಂಡು ಹೋಗಿದೆ. ವಿಷಯ ಏನೆಂದರೆ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಹಳೆಯ ವಿದ್ಯಾರ್ಥಿಗೆ ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್ ನ ಕೋ ಚೇರ್ ಆಗುವಂತೆ ಆಹ್ವಾನಿಸಿದೆ. id="toptextpromo">ಈ
ಸಂಬಂಧ ಕುಲಪತಿ ಪ್ರೊ. ಎನ್. ಪ್ರಭುದೇವ್ ಅವರು ಪೈ ಅವರಿಗೆ ಪತ್ರ ಬರೆದಿದ್ದು, ಬೆಂ.ವಿ.ವಿ. ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್ (BSE) ಉಪಾಧ್ಯಕ್ಷರಾಗುವಂತೆ ಕೋರಿದ್ದಾರೆ. ಉದ್ದೇಶಿತ BSEಗೆ ಕುಲಪತಿ ಅಧ್ಯಕ್ಷರಾಗಿರುತ್ತಾರೆ. ಸಂಸ್ಥೆಯು ಸಂಶೋಧನೆ, ಆರ್ಥಿಕ ನೀತಿ, ನಿರೂಪಣೆ ವಿಚಾರದಲ್ಲಿ ಸಲಹೆಗಳನ್ನು ನೀಡುವುದರ ಜತೆಗೆ ವಿವಿಯ ಗುಣಮಟ್ಟ ಹೆಚ್ಚಲು ಸೂಕ್ತ ನಿರ್ದೇಶನಗಳನ್ನು ನೀಡಲಿದೆ. id='are-slot-1' class='oiad oi-axt oiadv'> id='top-searched-articles'>ಉನ್ನತ
ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಿಕೊಳ್ಳುವಲ್ಲಿ ದೇಶದ ಬಹುತೇಕ ವಿವಿಗಳು ವಿಫಲವಾಗಿವೆ. ಮಾರುಕಟ್ಟೆ ಮತ್ತು ಉದ್ಯಮರಂಗಕ್ಕೆ ಬೇಕಾಗುವಂತಹ ಅಭ್ಯರ್ಥಿಗಳನ್ನು ರೂಪಿಸಲು ವಿವಿಗಳು ಎಡವುತ್ತಿವೆ. ಇದನ್ನೆಲ್ಲ ಮೀರಿ ನಿಲ್ಲುವ ದೂರದೃಷ್ಟಿಯಿಂದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಈ ಸಂಸ್ಥೆಯನ್ನು ರೂಪಿಸಬೇಕಾಗಿದೆ. ಇದಕ್ಕೆ ನಿಮ್ಮಂತಹವರು ಹೆಗಲು ಕೊಡಬೇಕಾಗಿದೆ. ಬಂದು ನಮ್ಮ ಸಂಸ್ಥೆಯನ್ನು ಸೇರಿಕೊಳ್ಳಿ ಎಂದು ಪ್ರೊ. ಪ್ರಭುದೇವ್ ಅವರು ಪತ್ರ ಮುಖೇನ ಮೋಹನದಾಸ್ ಪೈ ಅವರನ್ನು ಕೋರಿದ್ದಾರೆ.











Click it and Unblock the Notifications