ಭಾರತೀಯ ಪುರುಷರ ಜನನಾಂಗ ನಿಜ್ಕಕೂ ಚಿಕ್ಕದೇ...

Global Penis Sizes
ಬೆಂಗಳೂರು, ಏಪ್ರಿಲ್ 18: ತಲೆಬರಹ ನೋಡಿ ನಮ್ಮ ಹಣೆಬರಹವೇ ಇಷ್ಟು ಎಂದು ತಲೆ ಚಚ್ಚಿಕೋ ಬೇಡಿ ಪುರುಷ ಪುಂಗವರಾ! ಏನ್ಮಾಡಕ್ಕಾಗಲ್ಲ, ಇಡೀ ವಿಶ್ವದಲ್ಲಿ ಯಾವ್ಯಾವ ದೇಶದ ಪುರುಷರ ಶಿಶ್ನ ಎಷ್ಟೆಷ್ಟು ಉದ್ದ ಇದೆ ಎಂಬುದನ್ನು ಅಂತರ್ಜಾಲ ಸಮೀಕ್ಷೆ ಮೂಲಕ ಪಟ್ಟಿ ಮಾಡಲಾಗಿದೆ. ಅದರಂತೆ ಭಾರತೀಯ ಪುರುಷರು 116ನೇ ಸ್ಥಾನದಲ್ಲಿ ನಿಂತಿದ್ದಾರೆ. ಅದೇ ಕಾಂಗೋ ದೇಶದ ಪುರುಷ ಪುಂಗವರದ್ದು ನಂ 1.

ಕಾಂಗೊ ಗಣರಾಜ್ಯದ ಪುರುಷನ ಜನನಾಂಗ ಬರೋಬ್ಬರಿ 7.1 ಅಂಗುಲ ಉದ್ದ ಇದೆ. ಅಂದಹಾಗೆ ಭಾರತದ ಪುರುಷರ ಜನನಾಂಗದ ಉದ್ದ ಜಸ್ಟ್ 4 ಇಂಚು! ಇವೆಲ್ಲ ಹಾಗಿರಲಿ ತುಂಬಾ ಚಿಕ್ಕದು ಯಾರದು ಎಂದು ತಿಳಿಯುವ ಕೆಟ್ಟ ಕುತೂಹಲ ಎದುರಾಯಿತಾ? ಅದೇ ಕೊರಿಯನ್ನರದು, ಕೇವಲ 3.8 ಇಂಚು ಅಷ್ಟೆ. ಇದರಿಂದ ಮಾನಸಿಕವಾಗಿ ಕುಗ್ಗಿರುವ ಅನೇಕ ಭಾರತೀಯರು (ಬೆಂಗಳೂರಿನವರೂ ಸೇರಿದಂತೆ) ಶತಾಯಗತಾಯ ಇದನ್ನು ಹಿಗ್ಗಿಸಿಕೊಳ್ಳುವ ಯತ್ನದಲ್ಲಿ ಶಸ್ತ್ರಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಮಹಿಳೆಯರು ಸ್ತನಗಳನ್ನು ದೊಡ್ಡದು ಮಾಡಿಕೊಳ್ಳಲು ಸಿಲಿಕಾನ್ ಪ್ಯಾಕಿಂಗ್ ಮಾಡಿಸಿಕೊಳ್ಳುವಂತೆ.

ಇನ್ನು ಎರಡನೆಯ ಸ್ಥಾನದಲ್ಲಿರುವವರು ಈಕ್ವಡಾರ್ ನವರು. ಅವರೂ ಕಾಂಗೊ ಪುರುಷರಿಗೆ ಸರಿಸಮನಾಗಿ ನಿಲ್ಲುತ್ತಾರೆ. ಅಂದರೆ 6.9 ಅಂಗುಲ. ಘಾನಾ ಅವರದು 6.8 ಅಂಗುಲ ಸರಾಸರಿ ಉದ್ದದಲ್ಲಿದೆ. ನಮ್ಮ ಹಿಂದುಮುಂದು ಇರುವವರೆಂದರೆ ನೆರೆಯ ಚೀನಾ 112ನೇ ಸ್ಥಾನ ಮತ್ತು ನಮಗಿಂತ ಒಂಚೂರು ಚಿಕ್ಕದಾಗಿರುವವರು ಥಾಯ್ಲೆಂಡ್ ನವರು. ಅವರದು 117ನೇ ಸ್ಥಾನ. ಯುಕೆ 82ನೇ ಸ್ಥಾನ, ಅಮೆರಿಕ 98 , ಸ್ಪೇನ್ 85, ಆಸ್ಟ್ರೇಲಿಯಾ 94, ರೊಮೆನಿಯಾ 100, ಮಲೇಷ್ಯಾ 106 ಜಪಾನ್ 110ನೇ ಸ್ಥಾನದಲ್ಲಿದೆ. ಹೆಚ್ಚಿನ ಮಾಹಿತಿಗೆ ಆಸ್ಟ್ರೇಲಿಯಾದ ಈ ವೆಬ್ ಜಾಲದಲ್ಲಿ ಸಾಕ್ಷಾತ್ ಪರಾಂಬರಿಸಬಹುದು: http://www.everyoneweb.com/worldpenissize.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+