ರಾಜಸುಯೋಗ: 'ಐ ಆಮ್ ಕಲಾಂ'ಗೆ ಚಾರ್ಲ್ಸ್ ಬುಲಾವ್

ಬೆಂಗಳೂರು, ಏಪ್ರಿಲ್ 17: 'ಐ ಆಮ್ ಕಲಾಂ' ಸಿನಿಮಾವನ್ನು ಬಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ನಮಗೂ ತೋರಿಸಿ ಎಂದು ರಾಜಕುಮಾರ ಚಾರ್ಲ್ಸ್ ಚಿಕ್ಕಮಕ್ಕಳಂತೆ ರಚ್ಚೆ ಹಿಡಿದಿದ್ದಾರೆ. ಜತೆಗೆ, ಕಲಾಂ ತಾತಾನೂ ನಮ್ಮ ಪಕ್ಕದಲ್ಲೇ ಕುಳಿತು ನೋಡಲಿ ಬಿಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಸೋ, ಐ ಆಮ್ ಕಲಾಂ ಶೀಘ್ರವೇ ಲಂಡನ್ ಗೆ ಹಾರಲಿದೆ.

ಫ್ಲ್ಯಾಷ್ ಬ್ಯಾಕ್ .... ಐ ಆಮ್ ಕಲಾಂ ಎಂಬ ಸಿನಿಮಾ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನೊಂದಿಗೆ ಯಾಕೆ ತಳುಕುಹಾಕಿಕೊಂಡಿದೆ ಅಂದರೆ ನಮ್ಮ ಕಲಾಂ ಹೇಳಿಕೇಳಿ ಅದ್ಭುತ ಕನಸುಗಾರ. ಇಡೀ ನಾಡಿನ ಜನತೆಯಲ್ಲಿ ಕನಸಿನ ಬೀಜ ಬಿತ್ತಿದವರು. ಅದೇ ಗುಂಗಿನಲ್ಲಿ ರಾಜಸ್ಥಾನದ ಛೋಟು ಎಂಬ ಬಡ ಹುಡುಗನೊಬ್ಬ ಕಲಾಂ ಹೆಸರಿನಲ್ಲಿ ಸಿಕ್ಕಾಪಟ್ಟೆ ಕನಸು ಕಂಡ. ಏನಂತ ಅಂದರೆ ತಾನು ನಾಲ್ಕಕ್ಷರ ಕಲೀಬೇಕು ಎಂದು.
ಸರಿ ಇದು ಕಲಾಂ ಕಿವಿಗೆ ಬೀಳುವ ಮುನ್ನ ಬಾಲಿವುಡ್ ನಿರ್ಮಾಪಕ ಕಿವಿಗೆ ಬಿತ್ತು. ತಡವೇಕೆ ಎಂದು ಎನ್ ಜಿಒ ಸಂಸ್ಥೆಯೊಂದು ಉಚಿತವಾಗಿ ಐ ಆಮ್ ಕಲಾಂ ಚಿತ್ರವನ್ನು ನಿರ್ಮಿಸಿಯೇ ಬಿಟ್ಟಿತು. ಇದು ಸುಮಾರು ಎರಡು ವರ್ಷ ಹಿಂದಿನ ಕಥೆ.

ಕಟ್, ಓವರ್ ಟು ಬಕಿಂಗ್ ಹ್ಯಾಮ್ ಪ್ಯಾಲೆಸ್: ಚಿತ್ರಕ್ಕಾಗಿ ದುಡಿದಿರುವ ಬಾಲಿವುಡ್ ನ ಸುವಿಖ್ಯಾತ ಖಳನಟ ಗುಲ್ಷನ್ ಗ್ರೋವರ್ ತಮ್ಮ ಹಾಲಿವುಡ್ ನಂಟನ್ನು ಬಳಸಿಕೊಂಡು ಐ ಆಮ್ ಕಲಾಂಗೆ ಇತ್ತೀಚೆಗೆ ಒಂದಷ್ಟು ಪ್ರಚಾರ ಕಟ್ಟಿಕೊಟ್ಟರು. ಹಾಲಿವುಡ್ ನ ಖ್ಯಾತ ನಾಮರಾದ ಗೋಲ್ಡಿ ಹಾನ್, ಸ್ಟೆವೆನ್ ಸೀಗಲ್, ಚಾರ್ಲಿ ಚಾಪ್ಲಿನ್ ರ ಮೊಮ್ಮಗಳು ಕಾರ್ಮೆನ್ ಚಾಪ್ಲಿನ್ ಮತ್ತು ಎಂಜಿಎಂ ಪಿಕ್ಚರ್ಸ್ ಅಧ್ಯಕ್ಷೆ ಮೇರಿ ಪೇರೆಂಟ್ ಮುಂತಾದ ಮಹಾಮಹಿಮರು ಐ ಆಮ್ ಕಲಾಂ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಲಾಸ್ ಏಂಜಲೀಸ್ ನಲ್ಲಿ ನಡೆದ ಭಾರತೀಯ ಚಿತ್ರೋತ್ಸವದಲ್ಲಿ ಏಪ್ರಿಲ್ 12ರಂದು ಐ ಆಮ್ ಕಲಾಂ ಚಿತ್ರದ ಪ್ರದರ್ಶನವಿತ್ತು.

ಇದೇ ಸಂದರ್ಭದಲ್ಲಿ ಲಂಡನ್ ನಲ್ಲಿ ಚಾರ್ಲ್ಸ್ ಅವರನ್ನು ಭೇಟಿಯಾದ ಗುಲ್ಷನ್, ಹೀಗೀಗೆ ಎಂದು ತಮ್ಮ ಚಿತ್ರದ ಬಗ್ಗೆ ಹೇಳಿದ್ದಾರೆ. ಅದೇನದು ಕಲಾಂ ಅಂದರೆ, ಅದು ನಿಮ್ಮ ಮಾಜಿ ರಾಷ್ಟ್ರಪತಿ ಅವರ ಹೆಸರಲ್ವರಾ? ಅದ್ಯಾಕೆ ಚಿತ್ರಕ್ಕೆ ಅವರ ಹೆಸರಿಟ್ಟಿದ್ದೀರಿ? ಎಂದು ಆಸಕ್ತಿ ತೋರಿಸಿದ್ದೇ ತಡ. ನಟ ಗುಲ್ಷನ್ 'ಬುದ್ದಿ, ವಸಿ ಚಿತ್ರ ನೋಡ್ಬಿಡಿ. ನಿಮಗೇ ಗೊತ್ತಾಗುತ್ತೆ' ಎಂದಿದ್ದಾರೆ. ಅದಕ್ಕೆ ಬ್ರಿಟಿಷ್ ಸಿಂಹಾಸನವೇರಲು ಕ್ಷಣಗಣನೆ ಮಾಡುತ್ತಿರುವ ಪ್ರಿನ್ಸ್ ಚಾರ್ಲ್ಸ್ ಸಾಹೇಬರು, ಸರಿ ಒಂದು ಸಲ ನೋಡೇ ಬಿಡೋಣ ಎಂದಿದ್ದಾರೆ. ಸಾಧ್ಯವಾದರೆ ಕಲಾಂ ಅವರನ್ನೂ ಕರಕೊಂಡು ಬನ್ನಿ ಎಂದೂ ಆಹ್ವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+