ಇನ್ಫೋಸಿಸ್ ಗೆ ಮೋಹನ್ ದಾಸ್ ಪೈ ರಾಜೀನಾಮೆ

TV Mohandas Pai resigns
ಬೆಂಗಳೂರು, ಏ.15: ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿ ಇನ್ಫೋಸಿಸ್ ನ ಮಾನವ ಸಂಪನ್ಮೂಲ ಹಾಗೂ ಆಡಳಿತಕಾರಿ ಮೋಹನ್ ದಾಸ್ ಪೈ ರಾಜೀನಾಮೆ ನೀಡಿದ್ದಾರೆ. ಎಚ್ ಆರ್ ಡಿ ವಿಭಾಗವಲ್ಲದೆ ಹಲವಾರು ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದ ಪೈ, ಇನ್ಫೋಸಿಸ್ ನ ಆಧಾರ ಸ್ತಂಭವಾಗಿದ್ದರು. ಪೈ ಅವರ ರಾಜೀನಾಮೆಗೆ ಎನ್ ಆರ್ ನಾರಾಯಣಮೂರ್ತಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಇನ್ಫಿ ಬೋರ್ಡ್ ಗೆ ನಂದನ್ ನಿಲೇಕಣಿ ರಾಜೀನಾಮೆ ನೀಡಿದ ಬಳಿಕ, ಇದು ಎರಡನೇ ಅತಿದೊಡ್ಡ ಹೊಡೆತ ಎನ್ನಬಹುದು. ಮುಂಬರುವ ತಿಂಗಳುಗಳಲ್ಲಿ ಇನ್ಫೋಸಿಸ್ ಬೋರ್ಡ್ ನಿಂದ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹಾಗೂ ಕೆ. ದಿನೇಶ್ ಅವರು ಸಹಾ ಹೊರಬೀಳುತ್ತಿದ್ದಾರೆ. ಎಚ್ ಆರ್ ಡಿ ಅಲ್ಲದೆ, ಕಂಪೆನಿ ಆಡಳಿತ, ಶಿಕ್ಷಣ ಮತ್ತು ಸಂಶೋಧನೆ ಮುಂತಾದ ಹಲವು ವಿಭಾಗದಲ್ಲಿ ಪೈ ಕರ್ತವ್ಯ ನಿರ್ವಹಿಸಿದ್ದಾರೆ.

ಏ.15,2011ರಂದು ಇನ್ಫೋಸಿಸ್ ಬೋರ್ಡ್ ಮೀಟಿಂಗ್ ನಡೆಯಲಿದ್ದು, ಮೈಕ್ರೋಸಾಫ್ಟ್ ನ ಮಾಜಿ ಉದ್ಯೋಗಿ ರವಿ ವೆಂಕಟೇಶನ್ ಅವರನ್ನು ಹೆಚ್ಚುವರಿ ಡೈರೆಕ್ಟರ್ ಆಗಿ ಇನ್ಫೋಸಿಸ್ ಗೆ ನೇಮಕಮಾಡಲಾಗುವುದು. ಬೋರ್ಡ್ ನ ಉಳಿದ ಸದಸ್ಯರ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.

ಪೈ ಬಗ್ಗೆ ಒಂದಿಷ್ಟು: 1994ರಲ್ಲಿ ಇನ್ಫೋಸಿಸ್ ಸೇರಿದ ಪೈ, ಮೇ 2000ದಿಂದ ಬೋರ್ಡ್ ಸದಸ್ಯರಾಗಿದ್ದಾರೆ. 1994 ರಿಂದ 2006ರ ವರೆಗೂ ಮುಖ್ಯ ಫೈನಾನ್ಸ್ ಅಧಿಕಾರಿಯಾಗಿದ್ದರು.2006ರ ನಂತರ ಮಾನವ ಸಂಪನ್ಮೂಲ, ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕೇಲ್ಕರ್ ಸಮಿತಿ, ಸೆಬಿ ಬೋರ್ಡ್ ಮೂಲಕ ತೆರಿಗೆ ಸುಧಾರಣೆ ಜಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಬೆಂಗಳೂರು ಮೂಲದ ಪ್ರಕಾಶ್ ರೋಡ್ ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ನಾರಾಯಣಮೂರ್ತಿ ಅವರು ಇನ್ಫಿಗೆ ಸೇರಿಸಿ, ಮುಖ್ಯ ಹುದ್ದೆಗಳನ್ನು ನೀಡಿ ಬೆಳೆಸಿದರು.

ಯುವ ಜನಾಂಗಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಹುದ್ದೆಯನ್ನು ತೊರೆಯುತ್ತಿದ್ದೇನೆ. 17 ವರ್ಷ ಇನ್ಫಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿಯಿದೆ. ರಾಜೆನಾಮೆ ನನ್ನ ವೈಯಕ್ತಿಕ ನಿರ್ಧಾರ, ಇದರಲ್ಲಿ ಯಾವುದೇ ಒತ್ತಡವಿಲ್ಲ. ಮುಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಬಯಕೆ ಇದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ. ಜೂನ್ ತಿಂಗಳ ನಂತರ ಪೈ ಇನ್ಫಿ ಕ್ಯಾಂಪಸ್ ನಿಂದ ದೂರಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+