ಮುಸ್ಲಿಂ ಯುವತಿಯರಿಗೆ ಮೊಬೈಲ್ ನಿಷೇಧ?

Mobile ban Muslim woman
ನವದೆಹಲಿ, ಏ.13: ಮೊಬೈಲ್ ಬಳಕೆಯಿಂದ ಮುಸ್ಲೀಮರು ಧರ್ಮ ಭ್ರಷ್ಟರಾಗುತ್ತಿದ್ದಾರೆ. ಯುವ ಜನಾಂಗ ಅದರಲ್ಲೂ ಅವಿವಾಹಿತ ಮಹಿಳೆಯರಿಗೆ ಮೊಬೈಲ್ ನಿಷೇಧ ಹೇರುವುದು ಸೂಕ್ತ ಎಂಬ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಮಂಡಳಿ(ಜಹೀದ್ ಬಣ)ಯ ನಿರ್ಣಯಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ನಿಷೇಧವನ್ನು ಸ್ವಾಗತಿಸಿದ್ದರೆ, ಯುವಜನಾಂಗ ಆಕ್ಷೇಪ ವ್ಯಕ್ತಪಡಿಸಿದೆ.

ಮೊಬೈಲ್ ಫೋನು ಯುವ ಜನಾಂಗದಲ್ಲಿ ನಾಚಿಕೆ ಹುಟ್ಟಿಸುವ ರೀತಿಯಲ್ಲಿ ಬಳಕೆಯಾಗುತ್ತಿದೆ. ಮೊಬೈಲುಗಳು ಯುವ ಜನರನ್ನು ಭ್ರಷ್ಟರನ್ನಾಗಿಸುತ್ತಿದೆ. ಅವುಗಳಲ್ಲಿ ಹರಿದಾಡುವ ಅಶ್ಲೀಲ ಚಿತ್ರ, ಮೆಸೇಜುಗಳು ಅವರ ಮನಸ್ಸನ್ನು ವಿಚಲಿತಗೊಳಿಸಿ, ಅನಾಹುತಕ್ಕೆ ಕಾರಣವಾಗುತ್ತಿದೆ ಎಂದು AIMPLB ಕಾನೂನು ಮಂಡಳಿ ಅಭಿಪ್ರಾಯಪಟ್ಟಿದೆ.

"ಯುವಜನರು ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಯುವತಿಯರು ಮೊಬೈಲ್ ಬಳಕೆಯಿಂದ ದೂರ ಉಳಿಯಬೇಕು. ಮದುವೆಯಾಗುವವರೆಗೆ ಅವರಿಗೆ ಮೊಬೈಲ್ ಬಳಕೆ ನಿಷೇಧಿಸಬೇಕು" ಎಂದು ಎಐಎಂಪಿಎಲ್‌ಬಿ (ಜಹೀದ್) ಅಧ್ಯಕ್ಷ ತಾಖಿರ್ ರಜಾ ಖಾನ್ ಹೇಳಿದ್ದಾರೆ.

ಫ್ರಾನ್ಸಿನಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸದಂತೆ ನಿಷೇಧ ಹೇರಲಾಗಿರುವುದು ಇಸ್ಲಾಂಬಾಹಿರ ಕ್ರಮ ಎಂದು ಬಣ್ಣಿಸಿರುವ ಕಾನೂನು ಮಂಡಳಿ, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದಿದ್ದಾರೆ. ಮುಸ್ಲಿಮರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲು ಶಿಫಾರಸ್ಸು ಮಾಡಿರುವ ರಂಗನಾಥ್ ಮಿಶ್ರಾ ಹಾಗೂ ಸಾಚಾರ್ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ರಜಾ ಖಾನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+