ಜಪಾನ್: ಮತ್ತೆ ಭಾರಿ ಭೂಕಂಪ, ಸುನಾಮಿ ಕಟ್ಟೆಚ್ಚರ

ವೀಡಿಯೊ: ಜಪಾನಿಗೆ ಭೂಕಂಪ, ಸುನಾಮಿ ಮಾಸಿಕ
ಫೆಸಿಫಿಕ್ ಭಾಗ ಸೇರಿದಂತೆ ಈಶಾನ್ಯ ಜಪಾನಿನಲ್ಲಿ ತಕ್ಷಣವೇ ಸುನಾಮಿ ಕಟ್ಟೆಚ್ಚರವನ್ನೂ ಘೋಷಿಸಲಾಗಿದೆ. ಟೊಕಿಯೊ, ಫುಕಿಶಿಮಾದಲ್ಲಿ ಕಟ್ಟೆಚ್ಚರ ಘೋಷಣೆಯಾಗಿದೆ. ಭೂಕಂಪ ಕೇಂದ್ರೀಕೃತವಾಗಿದ್ದ ಸ್ಥಳದಲ್ಲಿ ಇಬರಾಖಿ ಪ್ರಿಫೆಕ್ಚರ್ ನಲ್ಲಿ 3 ಅಡಿ ಎತ್ತರದ ಸುನಾಮಿ ಅಲೆಗಳು ಬೀಸುವ ಅಪಾಯವಿದೆ ಎನ್ನಲಾಗಿದೆ. ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಕಳೆದ ಮಾರ್ಚ್ 11ರಂದು ಶುಕ್ರವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 2.45ರಲ್ಲಿ ಈಶಾನ್ಯ ಕರಾವಳಿಯಲ್ಲಿ 8.9 ಪ್ರಮಾಣದ ತೀವ್ರ ಭೂಕಂಪ ಸಂಭವಿಸಿತ್ತು. ಬಳಿಕ 13 ಅಡಿ ಎತ್ತರದ ಸುನಾಮಿ ಅಲೆಗಳು ರುದ್ರನರ್ತನ ಮಾಡಿತ್ತು. ಅದು ಜಪಾನಿನ ಅಣು ಶಕ್ತಿಯನ್ನೇ ಉಡುಗಿಸಿತ್ತು. ಒಟ್ಟು 20 ಸಾವಿರ ಮಂದಿ ಅಸುನೀಗಿದ್ದರು. ಈ ಒಂದು ತಿಂಗಳ ಅವಧಿಯಲ್ಲಿ ಸಣ್ಣ ಪುಟ್ಟ ನಡುಕಗಳ ಮದ್ಯೆ ಎರಡು ಬಾರಿ ಭಾರಿ ಭೂಕಂಪ ಸಂಭವಿಸಿತ್ತು.











Click it and Unblock the Notifications