ಆಣ್ಣಾ ಹಜಾರೆ ಚಳವಳಿಗೆ ವಿಕಿಲೀಕ್ಸ್ ಸ್ಫೂರ್ತಿ?
ಲಂಡನ್,
ಏ.11: ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಚಳವಳಿಯೊಂದಕ್ಕೆ ಸ್ಫೂರ್ತಿ ನೀಡುವಲ್ಲಿ ನೆರವಾಗಿದೆ ಎಂದು ಸ್ಫೋಟಕ ರಹಸ್ಯ ಮಾಹಿತಿಗಳನ್ನು ಹೊರಹಾಕುತ್ತಾ ಹಲವಾರು ಸರ್ಕಾರಗಳ ಬುಡ ಅಲ್ಲಾಡಿಸುತ್ತಿರುವ ಅಂತರ್ಜಾಲ ತಾಣ ವಿಕಿಲೀಕ್ಸ್ ನ ಸ್ಥಾಪಕ ಜುಲಿಯನ್ ಅಸ್ಸಾಂಜ್ ಅಭಿಪ್ರಾಯಪಟ್ಟಿದ್ದಾರೆ. ಲಂಡನ್‌ನ ನ್ಯೂ ಸ್ಟೇಟ್ಸ್‌ಮನ್ ಹಾಗೂ ಫ್ರಂಟ್‌ಲೈನ್ ಕ್ಲಬ್ ಏರ್ಪಡಿಸಿದ್ದ ಬಹಿರಂಗ ಚರ್ಚೆಯೊಂದರಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. id="toptextpromo">ಅಮೆರಿಕ
ದೂತಾವಾಸದ ರಹಸ್ಯ ದಾಖಲೆಗಳ ಬಗ್ಗೆ ಗಂಟೆಗಟ್ಟಲೆ ಹೇಳಬಹುದು. ಭಾರತದಲ್ಲಿ ಪ್ರಮುಖ ಪತ್ರಿಕೆ(ದಿ ಹಿಂದೂ)ಯೊಂದು ವಿಕಿಲೀಕ್ಸ್ ಬಹಿರಂಗಪಡಿಸಿದ ರಹಸ್ಯ ದಾಖಲೆಗಳನ್ನು 'ಇಂಡಿಯಾ ಕೇಬಲ್‌ಗೇಟ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ಭಾರತದಲ್ಲಿ ವಿಪಕ್ಷಗಳು ನಾಲ್ಕು ಬಾರಿ ಸಂಸತ್ತಿನಿಂದ ಹೊರನಡೆಯಲು ಹಾಗೂ ರಾಷ್ಟ್ರದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರಗತಿಗೆ ಚಾಲನೆ ದೊರೆತಿದೆ ಎಂದವರು ಅಭಿಪ್ರಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯುಪಿಎ
ಸರಕಾರವು ಭಾರತ-ಅಮೆರಿಕ ಅಣು ಒಪ್ಪಂದದ ಪರವಾಗಿ ವಿಶ್ವಾಸ ಮತ ಖರೀದಿಸಲು ಆರ್ ಎಲ್ ಡಿ ಸಂಸದರಿಗೆ ಯುಪಿಎ ಸರ್ಕಾರದಿಂದ ಲಂಚ ನೀಡಲಾಗಿದೆ ಎಂಬ ಮಾಹಿತಿಯನ್ನು ವಿಕಿಲೀಕ್ಸ್ ರಹಸ್ಯ ಕೇಬಲ್ ಬಯಲುಗೊಳಿಸಿತ್ತು.











Click it and Unblock the Notifications