ಸಚಿನ್ 2ನೇ ದೊಡ್ಡ ಕನಸು ನನಸಾಗುವ ಕಾಲ

Sachin Tendulkar
ಮುಂಬೈ, ಏ.5: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಒಂದು ಕನಸು ನನಸಾಗಿದೆ. ವಿಶ್ವಕಪ್ ಟ್ರೋಫಿ ಎತ್ತಿ ಸಂಭ್ರಮಿಸಿದ್ದಾಗಿದೆ. ಈಗ ಅವರ ಇನ್ನೊಂದು ಮಹತ್ವದ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ. ಈ ವರ್ಷಾಂತ್ಯಕ್ಕೆ ಬಾಂದ್ರಾದಲ್ಲಿ ನಿರ್ಮಾಣವಗುತ್ತಿರುವ ಭಾರಿ ಬಂಗಲೆಗೆ ಸಚಿನ್ ಪಾದಾರ್ಪಣೆ ಮಾಡಲಿದ್ದಾರೆ.

ಸದ್ಯ ಬಾಂದ್ರಾದ ಪೂರ್ವದಲ್ಲಿರುವ ಲಾ ಮೇರ್ ಅಪಾರ್ಟ್ಮೆಂಟ್ ನ ಸಾಹಿತ್ಯ ಸಹವಾಸ್ ಮನೆಯಲ್ಲಿ ವಾಸವಾಗಿರುವ ಸಚಿನ್, ಬಾಂದ್ರಾ ಪಶ್ಚಿಮದಲ್ಲಿರುವ ನಿರ್ಮಾಣ ಹಂತದ ಮನೆ ಪ್ರವೇಶಕ್ಕೆ ಕಾತುರರಾಗಿದ್ದಾರೆ. 2007ರಲ್ಲಿ ಸುಮಾರು 39 ಕೋಟಿ ವೆಚ್ಚ ತೂಗುತ್ತಿದ್ದ ಈ ಬೃಹತ್ ಕಟ್ಟಡದಲ್ಲಿ ಏನಿದೆ ಒಂದು ಸುತ್ತು ಹೊಡೆಯೋಣ ಬನ್ನಿ. ..

ವಿಡಿಯೋ: ಸಚಿನ್ ತೆಂಡೂಲ್ಕರ್ ನಿವೃತ್ತಿ ದೂರದ ಮಾತು | ಗ್ಯಾಲರಿ : ತಮ್ಮ ಮಕ್ಕಳೊಂದಿಗೆ ಸಚಿನ್ ವಿಶ್ವಕಪ್ ಸಂಭ್ರಮ

ನಾಲ್ಕು ಅಂತಸ್ತಿನ ಈ ಮನೆ ಪುನ ನವೀಕೃತ ಬಂಗಲೆಯಾಗಿದೆ. ಮೊದಲ ಅಂತಸ್ತಿನಲ್ಲಿ ಎರಡು ವಿಶಾಲವಾದ ಅತಿಥಿಗಳ ಕೊಠಡಿಯನ್ನು ಹೊಂದಿದೆ. ಎರಡು ಹಾಗೂ ಮೂರನೇ ಮಹಡಿಯಲ್ಲಿ ಸಚಿನ್ ಹಾಗೂ ಅವರ ಕುಟುಂಬಕ್ಕೆ ಮೀಸಲಾದ ಮಲಗುವ ಕೋಣೆಗಳಿವೆ. ನಾಲ್ಕನೇ ಮಹಡಿಯಲ್ಲಿ ಈಜುಕೊಳ, ಧ್ಯಾನ ಕೇಂದ್ರ, ವಿಶ್ರಾಂತಿ ಪಡೆಯಲು ಸರ್ವ ಅನುಕೂಲಗಳಿವೆ.

ಬಾಂದ್ರಾದ ಪೆರ್ರಿ ಕ್ರಾಸ್ ರಸ್ತೆಯ ದೊರಬ್ ವಿಲ್ಲಾ ಸುಮಾರು 8998 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ಮೊದಲಿಗೆ ಪಾರ್ಸಿ ಕುಟುಂಬದವರು ವಾಸವಾಗಿದ್ದರು. 2007ರಲ್ಲಿ ಈ ಪುರಾತನ ಮನೆಯನ್ನು ಖರೀದಿಸಿದ ಸಚಿನ್, ಸಂಪೂರ್ಣ ನವೀಕರಣಗೊಳಿಸಲು ಇಚ್ಚಿಸಿದರು. ಅದರಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗಿದೆ. ಮುಂಬೈ ಪಾಲಿಕೆ ಅಧಿಕಾರಿಗಳು ಕಾಮಗಾರಿ ನೋಡಿ ಯಾವುದೇ ರೀತಿ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಷರಾ ಹಾಕಿದ್ದಾರೆ. ಸಚಿನ್ ವರ್ಷಾಂತ್ಯಕ್ಕೆ ಈ ಬಂಗಲೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕಟ್ಟಡ ವಿನ್ಯಾಸಕಾರ ಪ್ರಕಾಶ್ ಸಪ್ರೆ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+