ಭಾರತ ತಂಡದಲ್ಲಿ ಎಲ್ಲರೂ ಫಿಟ್: ಧೋನಿ

ಮೊಹಾಲಿ, ಮಾ. 29: ಟೀಂ ಇಂಡಿಯಾದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ ಹಾಗೂ ನಾಳಿನ ಪಂದ್ಯಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಸೆಮಿಫೈನಲ್ ಪಂದ್ಯ ಮಹತ್ವ ಎಲ್ಲಾ ಆಟಗಾರರಿಗೂ ತಿಳಿದಿದೆ. ಆದರೆ, ಆಟಗಾರ ಮನಸ್ಥಿತಿ ಮೈದಾನದತ್ತ ನೆಟ್ಟಿದೆ. ಸುದ್ದಿವಾಹಿನಿಗಳು, ದಿನಪತ್ರಿಕೆ ವರದಿಗಳ ರಂಜನೀಯ ಸುದ್ದಿಗಳಿಂದ ದೂರ ಉಳಿಯುವಂತೆ ಎಲ್ಲಾ ಆಟಗಾರರಿಗೆ ತಿಳಿಸಲಾಗಿದೆ ಎಂದು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಎರಡು ತಂಡಗಳ ಹೋಲಿಕೆ, 2003, 2007ರಲ್ಲಿ ಏನಾಯಿತು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಪ್ರತಿ ಪಂದ್ಯವನ್ನು ಫ್ರೆಶ್ ಆಗಿ ನೋಡಬೇಕಾಗುತ್ತದೆ. ದಿನದ ಕೊನೆಯಲ್ಲಿ ಒಂದು ತಂಡ ಗೆಲ್ಲುವುದು ಮತ್ತೊಂದು ಸೋಲುವುದು ಇದ್ದದ್ದೇ. 100 ಓವರ್ ಗಳ ವರೆಗೆ ಆತ್ಮವಿಶ್ವಾಸದಿಂದ ಸಮರ್ಥವಾಗಿ ಆಡುವುದೇ ಗೆಲುವಿನ ಮಂತ್ರ ಎನ್ನಬಹುದು.

ರಾಜಕೀಯ ಪ್ರಭಾವ: ಕ್ರೀಡೆಗೂ ರಾಜಕೀಯಕ್ಕೂ ಬಿಡಿಸಲಾರದ ನಂಟು ಇರುವುದಂತೂ ಸತ್ಯ. ಭಾರತ ಹಾಗೂ ಪಾಕಿಸ್ತಾನದ ಪ್ರಧಾನ ಮಂತ್ರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಪಂದ್ಯ ವೀಕ್ಷಿಸಲು ಬರುತ್ತಿರುವುದು ಬಾಧಕವಾಗಿದೆ. ಎರಡು ದೇಶದ ಬಾಂಧವ್ಯಕ್ಕೆ ನಾವೇನೂ ಮಾಡಬಲ್ಲೆವು. ನನಗೆ ಕೊಟ್ಟಿರುವ ನಾಯಕ ಸ್ಥಾನಕ್ಕೆ ತಕ್ಕಂತೆ ಪ್ರದರ್ಶನ ನೀಡಿ, ತಂಡಕ್ಕೆ ಗೆಲುವು ತರುವುದು ನನ್ನ ಗುರಿ ಎಂದರು.

ಎರಡು ದಿನದಿಂದ ಟಿವಿ ನೋಡಿಲ್ಲ. ಕ್ರಿಕೆಟ್ ಅಭ್ಯಾಸ ಬಿಟ್ಟರೆ ಆಟಗಾರರು ಬೇರೇನೂ ಮಾಡುತ್ತಿಲ್ಲ. ಭಾರತ ತಂಡದ ನಾಯಕನೇ ಒತ್ತಡ ಜಾಸ್ತಿ. ಆದರೆ, ನನಗೆ ಚಾಲೆಂಜಿಂಗ್ ಕೆಲಸ ಇಷ್ಟ ಎಂದರು. ಪಾಕಿಸ್ತಾನ ತಂಡದ ಬೌಲಿಂಗ್ ಸದೃಢವಾಗಿದೆ. ಅಫ್ರಿದಿ ಉತ್ತಮ ಲಯದಲ್ಲಿದ್ದಾರೆ. ಪಿಚ್ ಬಗ್ಗೆ ಸದ್ಯಕ್ಕೆ ಮಾಹಿತಿ. ಆದರೆ, ಮೊದಲಿಗೆ ಬ್ಯಾಟ್ಸ್ ಮನ್ ಗೆ ಸಹಾಯಕವಾಗುವ ಸಾಧ್ಯತೆಯಿದೆ. ಭಾರತ ತಂಡದ ಆಯ್ಕೆ ಬಗ್ಗೆ ಸದ್ಯಕ್ಕೆ ಏನು ಹೇಳಲಾರೆ. ಎಲ್ಲರೂ ಉತ್ತಮ ಆಟ ನೀಡಲು ಕಾತುರಗಾರಿದ್ದಾರೆ ಎಂದು ಧೋನಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+