ಜಪಾನ್ ಸುನಾಮಿ ಅಮೆರಿಕಾದ ದುಸ್ಸಾಹಸವೇ!?

ಮೂರು ಶಕ್ತಿಶಾಲಿ ಸುನಾಮಿ ಅಣು ಬಾಂಬುಗಳನ್ನು ತ್ರಿಕೋನ ಮಾದರಿಯಲ್ಲಿ ಒಂದೆಡೆ ಎಸೆದರೆ ಅಥವಾ ಸಮುದ್ರದಾಳದಲ್ಲಿ ಸಿಡಿಸಿದರೆ ಉದ್ಭವವಾಗುವುದೇ ಸುನಾಮಿ. ಇದನ್ನು ಅಮೆರಿಕ ಕರಗತಮಾಡಿಕೊಂಡಿದೆ. ಭಾರತಕ್ಕೆ ಅಪ್ಪಳಿಸಿದ ಸುನಾಮಿಯ ಹಿಂದೆ ಅಮೆರಿಕದ ಕೈವಾಡ ಇದೆ ಎಂಬ ಶಂಕೆಯೂ ಬಲವಾಗಿದೆ. ಅದಕ್ಕೇ ಈಗ ಜಪಾನಿ ಸುನಾಮಿ ಅಮೆರಿಕದ ಕೈವಾಡವೇ ಎಂಬ ಸಂಶಯ, ಭೀತಿ ಎಲ್ಲೆಡೆ ಕೇಳಿಬರುತ್ತಿದೆ.
ಏನಾಗಿತ್ತೆಂದರೆ... ನ್ಯೂಜಿಲ್ಯಾಂಡ್ ಸಮುದ್ರದಲ್ಲಿ ಈ ಹಿಂದೆಯೇ ಇಂತಹ ಪ್ರಯೋಗ ನಡೆದಿದೆ. ಇದನ್ನು ರಹಸ್ಯ ಯುದ್ಧ ಪ್ರಯೋಗಗಳು ಎಂದು ವರ್ಗೀಕರಿಸುವ ಸಂಪ್ರದಾಯ ಇದೆ. ಇದು ಅಣು ಬಾಂಬ್-ಗಿಂತ ಭೀಕರ. 1944-45ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಕ್ಲಂಡ್ ಉತ್ತರಕ್ಕೆ ವಾಂಗಪರಾವೊ ಎಂಬಲ್ಲಿ ಸಮುದ್ರದೊಳಗೆ ನ್ಯೂಜಿಲ್ಯಾಂಡ್ ಸೇನೆಯೇ ಇಂತಹ ಸತತ ಪ್ರಯೋಗಗಳನ್ನು ನಡೆಸಿತು. ನೂರು ಅಡಿ ಎತ್ತರದ ಬೃಹತ್ ಅಲೆಗಳು ಒಂದೇ ತೆರನೆ ತೀರಕ್ಕೆ ಅಪ್ಪಳಿಸತೊಡಗಿತು. ಇದರ ರೂವಾರಿ ಆಸ್ಟ್ರೇಲಿಯಾದ ವಿಜ್ಞಾನಿ. ಈ ರಹಸ್ಯ ಕಾರ್ಯಾಚರಣೆಗೆ 'ಪ್ರಾಜೆಕ್ಟ್ ಸೀಲ್' ಎಂದೂ ಹೆಸರಿಸಲಾಗಿದೆ.
ಮುಂದೆ ಅಮೆರಿಕ ಮತ್ತು ಬ್ರಿಟನ್ ಇದರ ಬಗ್ಗೆ ಕೆಟ್ಟ ಕುತೂಹಲ ತೋರಿತು. ನ್ಯೂಜಿಲ್ಯಾಂಡ್ ಸರಕಾರದ ಬೆನ್ನುಹತ್ತಿತು. ನ್ಯೂಜಿಲ್ಯಾಂಡ್ ಇದಕ್ಕೆ ಒಲ್ಲೆ ಅಂದಾಗ ಸ್ವತಃ ತಾನೇ ಇಂತಹ ಬಾಂಬ್ ಮಾಡುವುದಕ್ಕೆ ಮುಂದಾಯಿತು. ಅಮೆರಿಕದ ಪೂರ್ವ ಕರಾವಳಿ ರಹಸ್ಯ ಕಾರ್ಯಾಚರಣೆಯ ಕಾರಸ್ಥಾನವಾಯಿತು. ಶೀತಲ ಸಮರ ಕಾಲದಲ್ಲಿ ಇದು ಮತ್ತಷ್ಟು ಪಕ್ವವಾಯಿತು. ಮುಂದೆ ಇಂಡೋನೇಷ್ಯಾ ಸರಕಾರದ ಜತೆಗೂಡಿ ಅಲ್ಲಿನ ಸ್ವಾತಂತ್ರ್ಯ ಚಳವಳಿನ್ನು ಹತ್ತಿಕ್ಕಲು ಸುನಾಮಿ ಬಾಂಬ್ ಸಿಡಿಸಿತು. ಅದು ಬರೋಬ್ಬರು 80,000 ಮಂದಿಯನ್ನು ಆಪೋಷನ ತೆಗೆದುಕೊಂಡಿತು.












Click it and Unblock the Notifications