ಟಾಟಾ ಡೊಕೊಮೊ ಗ್ರಾಹಕರಿಗೆ ಚಿನ್ನದ ಕೊಡುಗೆ
ಬೆಂಗಳೂರು,
ಮಾ.25: ಟಾಟಾ ಡೊಕೊಮೊ ಗ್ರಾಹಕರಿಗೆ ಚಿನ್ನದಂಥ ಸುದ್ದಿ ಇದೆ. ಯುಗಾದಿ ಹಬ್ಬ ಸಂಭ್ರಮವನ್ನು ಹೆಚ್ಚಿಸಲು ಟಾಟಾ ಡೊಕೊಮೊ ತನ್ನ ಕರ್ನಾಟಕದ ಗ್ರಾಹಕರಿಗೆ ಚಿನ್ನದ ಕೊಡುಗೆ ನೀಡುತ್ತಿದೆ. ಈ ಆಕರ್ಷಕ ಕೊಡುಗೆ ಡೊಕೊಮೊದ 3ಜಿ, ಪ್ರೀಪೇಯ್ಡ್, ಪೋಸ್ಟ್ ಪೇಯ್ಡ್ ಸೇರಿದಂತೆ ಟಾಟಾ ಡೊಕೊಮೊ ಉತ್ಪನ್ನ ಬಳಸುವ ಎಲ್ಲಾ ಗ್ರಾಹಕರಿಗೂ ಅನ್ವಯವಾಗಲಿದೆ. id="toptextpromo">ಟಾಟಾ
ಡೊಕೊಮೊ ನೀಡುವ ವಿವಿಧ ಶ್ರೇಣಿಯ ರೀಚಾರ್ಚ್ ವೋಚರ್ ಗಳ ಮೇಲೆ ಉಚಿತ ಟಾಕ್ ಟೈಂ ಜೊತೆಗೆ ಚಿನ್ನ ಗೆಲ್ಲುವ ಅವಕಾಶ ಕೂಡಾ ಇದೆ. 24, 29, 60, 65, 69, 90, 98 ಹಾಗೂ 180 ರು. ದರದ ರೀಚಾರ್ಚ್ ಮಾಡಿಸುವ ಗ್ರಾಹಕರಲ್ಲಿ ಒಬ್ಬರಿಗೆ 100 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ರೀತಿ 4 ಗ್ರಾಹಕರಿಗೆ 50 ಗ್ರಾಂ, 8 ಗ್ರಾಹಕರಿಗೆ 10 ಗ್ರಾಂ, 16 ಗ್ರಾಹಕರಿಗೆ 5 ಗ್ರಾಂ ಹಾಗೂ 100 ಗ್ರಾಹಕರಿಗೆ 2 ಗ್ರಾಂ ಚಿನ್ನ ಲಭಿಸಲಿದೆ. ಎ. 5 ರವರೆಗೆ ಈ ಕೊಡುಗೆ ಚಾಲ್ತಿಯಲ್ಲಿರುತ್ತದೆ. ಏ.4ರ ಯುಗಾದಿ ಹಬ್ಬದ ಜೊತೆಗೆ ಚಿನ್ನ ಗೆದ್ದರೆ ಸಂಭ್ರಮ ಇನ್ನಷ್ಟು ಹೆಚ್ಚಲಿದೆ ಎಂದು ಟಾಟಾ ಡೊಕೊಮೊ ದಕ್ಷಿಣ ವಿಭಾಗ ಮುಖ್ಯಸ್ಥ ಯತೀಶ್ ಮಹೋತ್ರ ಹೇಳುತ್ತಾರೆ. ಡೊಕೊಮೊ ಬಳಸುವ ಗ್ರಾಹಕರೇ, ಇನ್ನೇಕೆ ತಡ ತಕ್ಷಣವೇ ಮೇಲ್ಕಂಡ ಶ್ರೇಣಿ ದರದಲ್ಲಿ ರೀಚಾರ್ಚ್ ಮಾಡಿಸಿಕೊಂಡು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.











Click it and Unblock the Notifications