ಚಳಿಗಾಲಕ್ಕೆ ಬೆಚ್ಚನೆ ಆಫರ್ ಗೂಗಲ್ ನೆಕ್ಸಸ್ 4ಜಿ

ನೆಕ್ಸಸ್ ಮೊದಲ ಆವೃತ್ತಿ ಮೊಬೈಲ್ ವಿನ್ಯಾಸಗೊಳಿಸಿದ್ದ ವಿಶ್ವದ ಎರಡನೇ ಅತಿ ದೊಡ್ಡ ಸ್ಯಾಮ್ ಸಂಗ್, ಈ ಮೊಬೈಲ್ ಅನ್ನು ಸಹ ಉತ್ಪಾದಿಸುತ್ತಿದೆ. 4 ಇಂಚಿನ ಸುಂದರ ದರ್ಶಕ, 1 GHz ಹಮ್ಮಿಂಗ್ ಬರ್ಡ್ ಪ್ರೊಸೆಸರ್, ಎರಡು ಬದಿ ಕೆಮೆರಾ, 16 ಜಿಬಿ ಆಂತರಿಕ ಮೆಮೋರಿ ಜೊತೆಗೆ NFC (near field communication) ಸೌಲಭ್ಯ ಎಂದಿನಂತೆ ಗ್ರಾಹಕರಿಗೆ ಲಭ್ಯವಾಗಲಿದೆ.
ಇದರ ಜೊತೆಗೆ ಗೂಗಲ್ ವಾಯ್ಸ್ ಸೌಲಭ್ಯದ ಮೂಲಕ ಏಕಕಾಲಕ್ಕೆ ಅನೇಕ ಮೊಬೈಲ್ ಗೆ ರಿಂಗ್ ಮಾಡಬಹುದು. ಸ್ಪ್ರಿಂಟ್ ಮೊಬೈಲ್ ಸಂಖ್ಯೆ ಉಳ್ಳ ಗ್ರಾಹಕರು ಹೆಚ್ಚಿನ ಬದಲಾವಣೆ ಇಲ್ಲದೆ ಸುಲಭವಾಗಿ ಗೂಗಲ್ ವಾಯ್ಸ್ ಸೌಲಭ್ಯವನ್ನು ಬಳಸಬಹುದಾಗಿದೆ.
ಸ್ಯಾಮ್ ಸಂಗ್ ನೆಕ್ಸಸ್ ಎಸ್ ವಿಶೇಷತೆಗಳು:
* 4 ಇಂಚಿನ WVGA (800 x 480) AMOLED ಟಚ್ ಸ್ಕ್ರೀನ್ ದರ್ಶಕ
* LED ಫ್ಲಾಶ್ ಹೊಂದಿರುವ 5 ಮೆಗಾ ಪಿಕ್ಸಲ್ ಕೆಮೆರಾ
* VGA ಕೆಮೆರಾ ವಿಡಿಯೋ ಕಾಲಿಂಗ್ ಗೆ
* ಆಂಡ್ರ್ಯಾಂಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್
* 1GHz Cortex A8 (Hummingbird) ಪ್ರೊಸೆಸರ್
* ಬ್ಲೂಟೂಥ್ 2.1, ವೈಫೈ 802.11 b/g/n
* Near Field Communications (NFC)
* ಎಜಿಪಿಎಸ್, ಗೈರೋಸ್ಕೋಪ್
* ಇಂಟರ್ ನೆಟ್ ಕಾಲಿಂಗ್ (VoIP/SIP)
* ಲಿಥಿಯಂ ಅಯಾನ್ (Li-Ion) (1500 mAH)












Click it and Unblock the Notifications