ಬಾಜಿ ಕಟ್ಟಿ ನೋಡು ಬಾರಾ, ಭಾರತಕ್ಕೇ ಗೆಲುವು!

ಬೆಂಗಳೂರು, ಮಾ. 22: ಈ ಬಾರಿ ವಿಶ್ವ ಕಪ್ ಮುಡಿಗೇರಿಸಿಕೊಳ್ಳುವ ಭಾರತದ ಕನಸನ್ನು ನುಚ್ಚುನೂರು ಮಾಡಲು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಎನಿಸಿರುವ ಆಸ್ಟ್ರೇಲಿಯಾ ತಂಡ ಅಹಮದಾಬಾದಿನಲ್ಲಿ ನಾಳಿದ್ದು (ಮಾರ್ಚ್ 24) ಸಜ್ಜಾಗಿಯೇ ಇದೆ. ಆದರೂ ಬುಕ್ಕಿಗಳಿಗೆ ಧೋನಿ ಮತ್ತು ಆತನ ತಂಡದ ಮೇಲೆ ಅದೆಂತದೋಪ್ರೀತಿ. ಈ ಬಾರಿ ಧೋನಿ ಪಡೆಗೇ ವಿಶ್ವ ಕಪ್ ಎಂದು ಬುಕ್ಕಿಗಳು ಈಗಾಗಲೇ ಘೋಷಿಸಿದ್ದಾರೆ. ಒಟ್ಟಿನಲ್ಲಿ ಬುಕ್ಕಿಗಳಿಗೆ ಏನಾಗಬೇಕೆಂದರೆ ಮೊಹಾಲಿಯಲ್ಲಿ ಭಾರತ v/s ಪಾಕಿಸ್ತಾನದ ಕದನ ಕುತೂಹಲ ಏರ್ಪಡಬೇಕು. ಅಲ್ಲಿಂದ ಮುಂದಕ್ಕೆ ಧೋನಿ ಪಡೆ ಕಪ್ ಎತ್ತಿಹಿಡಿಯಬೇಕು. ಬುಕ್ಕಿಗಳಿಗೆ ಸೊಪ್ಪು ಹಾಕುವ ಇರಾದೆ ಇಲ್ಲದಿದ್ದರೂ ನೂರಾರು ಕೋಟಿ ಭಾರತೀಯರ ಆಸೆಯೂ ಇದೇ ಆಗಿದೆ. ಕುರುಡು ಕಾಂಚಾಣ ಏನೆಲ್ಲ ಆಟವಾಡಿಸಲಿದೆಯೋ!?


ಮುಂಬಯಿಯಲ್ಲಿ ಏಪ್ರಿಲ್ 2ರಂದು ನಡೆಯಲಿರುವ ಫೈನಲ್ಸ್ ಪಂದ್ಯದಲ್ಲಿ ಭಾರತದ ಪರ ಮೂರಕ್ಕೆ ಒಂದು ಬಾಜಿ ಕಟ್ಟಿ ಎನ್ನುತ್ತಿದೆ ಲ್ಯಾಡ್ ಬ್ರೋಕ್ಸ್(Ladbrokes) ಎಂಬ ಮುಂಚೂಣಿ ಬೆಟ್ಟಿಂಗ್ ಸೈಟ್. ಅಂದರೆ ಭಾರತ ಕಪ್-ಅನ್ನು ತನ್ನದಾಗಿಸಿಕೊಂಡರೆ...ರೆ ನೀವು 1,000 ರುಪಾಯಿ ಕಟ್ಟಿದ್ದರೆ 3,000 ರು. ನಿಮ್ಮದಾಗಲಿದೆ. ಮತ್ತುಂದೊ ಪ್ರಮಖ ಬೆಟ್ಟಿಂಗ್ ವೆಬ್ ಸೈಟ್ ವಿಲಿಯಂಹಿಲ್ (Williamhill) ಹೇಳುವಂತೆ ಅತಿಥಿ ರಾಷ್ಟ್ರವೇ ಕಪ್ ಗೆಲ್ಲಲಿದೆಯಂತೆ.

ಬಾಜಿ ಸಾಮ್ರಾಜ್ಯ ಇಲ್ಲಿಗೇ ಕೊನೆಯಾಗುವುದಿಲ್ಲ. ಬಾಜಿದಾರರು ದಕ್ಷಿಣ ಆಫ್ರಿಕಾವನ್ನೂ ತಮ್ಮ ಕಣಕ್ಕೆ ಇಳಿಸಿಕೊಂಡಿದ್ದಾರೆ. www.bet365.com ಎಂಬ ವೆಬ್ ಸೈಟ್ ಪ್ರಕಾರ ದ. ಆಫ್ರಿಕಾ ಪರ ಹತ್ತಕ್ಕೆ ಮೂರು ಬಾಜಿ ಇದೆ. ಭಾರತದ ಪರ ಇವರದೂ ಮೂರಕ್ಕೆ ಒಂದು ಬಾಜಿ ಆಟವಿದೆ. ಫೈನಲ್ಸ್ ಇರಲಿ ಮೊದಲು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಏನಾದೀತು ಎಂದು ಆತುರ ಕಾತುರ ಹೊಂದಿರುವವರಿಗಾಗಿ... ಲ್ಯಾಡ್ ಬ್ರೋಕ್ಸ್ ಬಳಿ ಭಾರತದ ಪರ ಎಂಟಕ್ಕೆ ಹದಿಮೂರು ಇದೆ. ಅದೇ ಆಸ್ಟ್ರೇಲಿಯಾ ಪರವಾದರೆ ಬಾಜಿ ಅನುಪಾತ ಐದಕ್ಕೆ ನಾಲ್ಕು ಇದೆ. ಇನ್ನು, ವಿಲಿಯಂಹಿಲ್ ಸಹ ಭಾರತದ ಮೇಲೆಯೇ ಕೂತಿದೆ. ಅದರ ಆಟ ಭಾರತದ ಪರ ನಾಲ್ಕಕ್ಕೆ ಆರು. ಅದೇ ಆಸ್ಟ್ರೇಲಿಯಾ ಪರವಾದರೆ ಆರಕ್ಕೆ ಐದು. ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಪರವೂ ಲ್ಯಾಡ್ ಬ್ರೋಕ್ಸ್ ಒಲವು ತೋರಿದೆ.

ಫೈನಲ್ಸ್-ನಲ್ಲಿ, ಲ್ಯಾಡ್ ಬ್ರೋಕ್ಸ್ ಪ್ರಕಾರ ಭಾರತಕ್ಕೆ ಶ್ರೀಲಂಕಾ ಅಥವಾ ದ. ಆಫ್ರಿಕಾ ಯಾವುದೇ ಎದುರಾಳಿಯಾದರೂ ಬಾಜಿ ಭಾರತದ ಪರ ಐದು ಒಂದು. ಇತರೆ ಕ್ವಾ. ಫೈನಲ್-ಗಳ ಕತೆಯೇನೆಂದರೆ ಮೀರ್ ಪುರದಲ್ಲಿ ಪಾಕಿಸ್ತಾನವು ವಿಂಡೀಸ್ಅನ್ನು ಮಣ್ಣುಮುಕ್ಕಿಸಲಿದೆ. ಇದೇ ಬಾಜಿದಾರರ ಪ್ರಕಾರ ದ. ಆಫ್ರಿಕಾಗೆ ನ್ಯೂಜಿಲ್ಯಾಂಡ್ ಸುಲಭದ ತುತ್ತು. ಶ್ರೀಲಂಕಾ ಸಹ ಇಂಗ್ಲೆಂಡ್ ವಿರುದ್ಧ ಹೆಚ್ಚು ಬೆವರು ಸುರಿಸುವ ಆಗತ್ಯ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+