ಲಿಬಿಯಾ ಮೇಲೆ ಪಾಶ್ಚಿಮಾತ್ಯರ ವೈಮಾನಿಕ ದಾಳಿ
ಬೆಂಗಾಝಿ,
ಮಾ. 20: ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸಿರುವ ಲಿಬಿಯಾ ಮೇಲೆ ಅಮೆರಿಕ ಹಾಗೂ ಫ್ರಾನ್ಸ್ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ಮೈತ್ರಿ ಕೂಟ ಯುದ್ಧ ಸಾರಿವೆ. ಬೆಂಗಾಝಿ ನಗರ ಮೇಲೆ ವೈಮಾನಿಕ ದಾಳಿ ಆರಂಭಿಸಿರುವ ಫ್ರೆಂಚ್ ಯುದ್ಧ ವಿಮಾನಗಳಿಗೆ ಇಂಗ್ಲೆಂಡ್ ಸೇರಿದಂತೆ ಯುರೋಪ್ ರಾಷ್ಟ್ರಗಳು ಬೆಂಬಲಿಸಿವೆ. ಆದರೆ, ರಷ್ಯಾ ಮಾತ್ರ ವೈಮಾನಿಕ ದಾಳಿಯನ್ನು ಖಂಡಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಗದಾಫಿಗೆ ಹಿಂಸಾಚಾರ ನಡೆಸದಂತೆ ಎಚ್ಚರಿಕೆ ನೀಡಿತ್ತು. ಆದರೆ, ಲಿಬಿಯಾ ಯುದ್ಧವಿಮಾನಗಳು ದಾಳಿ ಮುಂದುವರೆಸಿದ್ದವು. id="toptextpromo">ಫ್ರಾನ್ಸ್
ನ ಅಧ್ಯಕ್ಷ ನಿಕೋಲಾಸ್ ಸರ್ಝೋಕಿ ಹಾಗೂ ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕೆಮರಾನ್ ಅವರು ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಭಾಗಿಅಯಗುತ್ತಿರುವುದು ವಿಷಾದದ ಸಂಗತಿ. ಪುರುಷರು ಹಾಗೂ ಮಹಿಳೆಯರು, ಮಕ್ಕಳು ಎಲ್ಲರೂ ನಮ್ಮ ಜೊತೆಗಿದ್ದಾರೆ. ಲಿಬಿಯದ ವ್ಯವಹಾರಗಳಲ್ಲಿ ಪಾಶ್ಚಿಮಾತ್ಯ ಶಕ್ತಿಗಳ ಮಧ್ಯಪ್ರವೇಶವು ಅನ್ಯಾಯ. ಬೆಂಗಾಝಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಘೋಷಿಸಿದ್ದ ಕದನ ವಿರಾಮವನ್ನು ಅಲ್‌ಖಾಯಿದಾ ಬೆಂಬಲಿಗರು ಉಲ್ಲಂಘಿಸಿದ್ದಾರೆ ಎಂದು ಗದಾಫಿ ಪ್ರತಿನಿಧಿಗಳು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಾಝಿ
ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ಭೀಕರ ಕಾಳಗ ಆರಂಭಗೊಂಡಿದೆ. ಒಡಿಸ್ಸಿ ಡಾನ್ ಎಂಬ ಹೆಸರಿನಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ಸೇನೆ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ. ಸುಮಾರು 110 ಕ್ಕೂ ಅಧಿಕ ಕ್ಷಿಪಣಿಗಳು ಲಿಬಿಯಾ 20ಕ್ಕೂ ಹೆಚ್ಚು ಭದ್ರತಾ ತಾಣಗಳ ಮೇಲೆ ದಾಳಿ ನಡೆಸಿವೆ. ಬೆಂಗಾಝಿ, ಟ್ರಿಪೊಲಿ ನಗರಗಳಲ್ಲಿ ಎರಡು ದಿನಗಳಲ್ಲಿ ಸುಮಾರು 52 ಜನ ಸತ್ತಿದ್ದು, 150 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.











Click it and Unblock the Notifications