ಎಒಎಲ್ : 400 ಭಾರತ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಲಭ್ಯವಿರುವ ಮಾಹಿತಿಗಳ ಪ್ರಕಾರ ನೂರಾರು ಜನ ಭಾರತೀಯರಿಗೆ ಈಗಾಗಲೆ ಮನೆ ಹಾದಿ ತೋರಿಸಲಾಗಿದೆ. ಆದರೆ, ಕಂಪೆನಿ ವೆಬ್ ಸೈಟ್ ನಲ್ಲಿ ಮಾರ್ಚ್ 2011 ರ ವರೆಗೂ ಯುಕೆ, ಯುಎಸ್ ಹಾಗೂ ಐರ್ಲೆಂಡ್ ನಲ್ಲಿ ನೇಮಕಾತಿ ಜಾರಿಯಲ್ಲಿರುತ್ತದೆ ಎಂದು ಹಾಕಲಾಗಿದೆ. ಭಾರತದಲ್ಲಿ ಎಒಎಲ್ ಸುಮಾರು 400 ಜನರಿಗೆ ಪಿಂಕ್ ಸ್ಲಿಪ್ ನೀಡಲಿದೆ. ಆದರೆ, ವೆಬ್ ಮಾಹಿತಿಯಂತೆ ಯುಕೆ, ಯುಎಸ್ ನಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ.
ಎಒಎಲ್ ಸಿಇಒ ಟಿಮ್ ಆರ್ಮ್ ಸ್ಟ್ರಾಂಗ್ ಹೇಳುವಂತೆ, ಕಂಪೆನಿ ಯುಎಸ್ ನಲ್ಲಿ 200 ಜನ, ಭಾರತದಲ್ಲಿ 700 ಜನರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಆದರೆ, ಸುಮಾರು 300 ಮಂದಿಗೆ ಹೊರಗುತ್ತಿಗೆ ನಿರ್ವಹಣೆ ನೀಡುವ ಸಾಧ್ಯತೆಯಿದೆ. ಸುಮಾರು 400 ರಿಂದ 600 ಜನರನ್ನು ಭಾರತ ಹಾಗೂ ಯುಎಸ್ ಕೇಂದ್ರಗಳಿಂದ ಮನೆಗೆ ಕಳಿಸಬೇಕಿದೆ ಎಂದಿದ್ದಾರೆ.
ಆದರೆ, ಸುನಾಮಿ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಜಪಾನ್ ನ ಕೇಂದ್ರಕ್ಕಾಗಿ ಭಾರತದಿಂದ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ಜಾಬ್ ಇನ್ನೂ ಸೇಫ್ ಎಂದಿದ್ದಾರೆ. ಇಮೇಲ್, ಚಾಟ್ ರೂಮ್, ಲೋಕಲ್ ಗೈಡ್, ಮೈ ಇಅಡ್ರೆಸ್, ಎಕ್ಸ್ ಡ್ರೈವ್ ಹಾಗೂ ಗೇಮ್ಸ್ ಮುಂತಾದ ಉಚಿತ ಸೇವೆಗಳನ್ನು ಎಒಎಲ್ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ.












Click it and Unblock the Notifications