ತುಮಕೂರು ಖಾಸಗಿ ಬಸ್ ಪ್ರಯಾಣ ದರ ಏರಿಕೆ
ತುಮಕೂರು,
ಮಾ. 10: ತುಮಕೂರು ನಗರಕ್ಕೆ ಸಾರಿಗೆ ವ್ಯವಸ್ಥೆ ಸಿಕ್ಕ ಖುಷಿಯಲ್ಲೇ ಜಿಲ್ಲೆಗೆ ಆಧಾರವಾಗಿರುವ ಖಾಸಗಿ ಬಸ್ ಗಳ ಸಂಚಾರ ದರ ಏರಿಕೆಯ ಬಿಸಿಯನ್ನು ಗ್ರಾಹಕರಿಗೆ ತಟ್ಟಲಿದೆ. ಮಾ.10ರಿಂದ ಪ್ರಯಾಣ ದರ ಏರಿಕೆಯಾಗಲಿದ್ದು, ಡಿಸೇಲ್‌ದರ, ಬಾಡಿ ಬಿಲ್ಟಿಂಗ್, ಬಿಡಿಭಾಗಗಳ ದರ ಇನ್ನಿತರೆ ಖರ್ಚುಗಳನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಪ್ರಯಾಣದರ ಹೆಚ್ಚಿಸಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮನವಿ ಮಾಡಿದೆ. id="toptextpromo">ಪ್ರತಿ
ಕಿ.ಮಿ.ಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ. 0 ಇಂದ 6.5 ಕಿ.ಮಿ.ವರೆಗೆ 5 ರೂ., 13 ಕಿ.ಮಿ.ವರೆಗೆ 6.50 ರೂ., 13 ರಿಂದ 19 ಕಿ.ಮಿ.ವರೆಗೆ 10.50 ರೂ., 19ರಿಂದ 26 ಕಿ.ಮಿ.ವರೆಗೆ 13.50ರೂ., 26 ರಿಂದ 32 ಕಿ.ಮಿ. ವರೆಗೆ 15 ರೂ., 32 ರಿಂದ 39 ಕಿ.ಮಿ.ವರೆಗೆ 20 ರೂ. ಹೀಗೆ ದರ ಹೆಚ್ಚಿಸಿದ್ದು, 104 ಕಿ.ಮಿ.ಗೆ 56 ರೂ. ದರ ನಿಗದಿಪಡಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಬಸ್
ಪ್ರಯಾಣದರ ಏರಿಕೆಗೂ ಮುನ್ನ ಜಿಲ್ಲಾಡಳಿತ, ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಖಾಸಗಿ ಬಸ್ ಮಾಲೀಕರ ಸಂಘ ಸಭೆ ಸೇರಿ ಚರ್ಚೆ ನಡೆಸಿದ್ದರು. ಎಲ್ಲರಿಗೂ ಒಮ್ಮತವಾದ ಮೇಲೆ ಪ್ರಸುತ ದರ ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ. ಮೂರು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ತುಮಕೂರು ನಗರದಲ್ಲಿ ಪ್ರಥಮ ಹಂತವಾಗಿ ನಗರ ಸಾರಿಗೆಯನ್ನು ಪ್ರಾರಂಭಿಸಲಾಗಿದೆ. ಸುಮಾರು ಹತ್ತು ವರ್ಷಗಳಿಗೂ ಹೆಚ್ಚಿನ ಕಾಲದ ಬೇಡಿಕೆ ಈಡೇರಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ. ಕ್ಯಾತ್ಸಂದ್ರದಿಂದ ಹೆಗ್ಗರೆಯವರೆಗೆ ಫೆ.18ರಿಂದ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿ ಹತ್ತು ನಿಮಿಷಕ್ಕೆ ಒಂದು ನಗರ ಸಾರಿಗೆ ಬಸ್ ಸಂಚರಿಸುವ ಮೂಲಕ ಹೊಸ ವ್ಯವಸ್ಥೆಗೆ ನಾಂದಿ ಹಾಡಲಾಗಿತ್ತು.











Click it and Unblock the Notifications