ನೋಕಿಯಾ E7 ಮೊಬೈಲ್ ಗೆ ಬುಕ್ಕಿಂಗ್ ಆರಂಭ

ಬಹುಶಃ ಏಪ್ರಿಲ್, ಮೇ ತಿಂಗಳ ಮೊದಲಲ್ಲಿ ನೋಕಿಯಾ E7 ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಹತ್ತು ಹಲವು ಸೌಲಭ್ಯಗಳ ಆಗರವಾದ ಈ ಸ್ಮಾರ್ಟ್ ಫೋನ್ ಅಂಗೈಯಲ್ಲೇ ಸಕಲ ಸೌಲಭ್ಯ ಒದಗಿಸಲಿದೆ. 4 ಇಂಚಿನ AMOLED ದರ್ಶಕ, ಸ್ಲೈಡ್ ಮಾಡಬಲ್ಲ QWERTY ಕೀ ಪ್ಯಾಡ್. 8 ಮೆಗಾ ಪಿಕ್ಸಲ್ ಕೆಮೆರಾ, ಎರೆಡೆರಡು LED ಫ್ಲ್ಯಾಶ್ ಹಾಗೂ 720p HD ವಿಡಿಯೋ ರೆಕಾರ್ಡಿಂಗ್ ಸೌಲಭ್ಯ. ಉಳಿದಂತೆ, ವೈ ಫೈ, ಜಿಪಿಎಸ್, ಬ್ಲೂಟೂಥ್, 3ಜಿ ಎಲ್ಲವೂ ಇದೆ. ಬೆಲೆ ಕೊಂಚ ಹೆಚ್ಚಾಯಿತು ಎಂದೆನಿಸಿದರೂ, ಮಾರುಕಟ್ಟೆಯಲ್ಲಿ ಗ್ರಾಹಕ ನಂಬಿಕೆಯ ಬ್ರ್ಯಾಂಡ್ ಎಂ ಹಿರಿಮೆಯನ್ನು ನೋಕಿಯಾ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ನೋಕಿಯಾ E7 ವಿಶೇಷತೆಗಳು:
* ಸ್ಲೈಡ್ ಮಾಡಬಲ್ಲ QWERTY ಕೀಬೋರ್ಡ್
* ಫುಲ್ ಸ್ಕ್ರೀನ್ ಹ್ಯಾಂಡ್ ರೈಟಿಂಗ್ ರಿಕೆಗ್ನಿಷನ್
* 8 ಮೆಗಾಪಿಕ್ಸಲ್ ಕೆಮೆರಾ ಹಾಗೂ VGA ಕೆಮೆರಾ
* ಉತ್ತಮವಾದ LED ಫ್ಲ್ಯಾಶ್ ಸೌಲಭ್ಯ
* ಸಿಂಬಿಯಾನ್ 3 ಆಪರೇಟಿಂಗ್ ಸಿಸ್ಟಮ್
* 3ಜಿ, ಜಿಪಿಎಸ್, ಜಿಪಿಆರ್ ಎಸ್, ಬ್ಲೂಟೂಥ್
* WLAN IEEE 802.11 b/g/n
* ಎಫ್ ಎಂ ರೇಡಿಯೋ, ಎಂಪಿ4 ಪ್ಲೇಯರ್
* BL-4D 1200 mAh Li-Ion battery
* 16 ಜಿಬಿ( 32 ಜಿಬಿ ತನಕ ವಿಸ್ತರಣೆ ಸೌಲಭ್ಯ)
ವಾಣಿಜ್ಯ ಉದ್ದೇಶಕ್ಕೆ ಬಳಸುವ ಮೊಬೈಲ್ ಗಳಲ್ಲಿ ನೋಕಿಯಾ E7 ಅಗ್ರಸ್ಥಾನ ಪಡೆದಿದ್ದು, ಸಿಂಬಿಯಾನ್ 3 ಅಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಮಾರ್ಚ್ ಎರಡನೇ ವಾರದ ನಂತರ ಗ್ರಾಹಕರು ಪ್ರಿಯಾರಿಟೀ ಡೀಲರ್ ಬಳಿ ಮೊಬೈಲ್ ಕಾರ್ಯಕ್ಷಮತೆಯ ಟ್ರಯಲ್ ನೋಡಬಹುದು. ಮೊಬೈಲ್ ಕೊಳ್ಳಲು ಆಸಕ್ತಿ ಉಳ್ಳವರು ಆನ್ ಲೈನ್ ಮೂಲಕ ಕೂಡಾ ಫಾರ್ಮ್ ಭರ್ತಿ ಮಾಡಬಹುದು ಎಂದು ನೋಕಿಯಾ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications