ಠೇವಣಿ ಸಂಗ್ರಹ: ಎನ್‌ಸಿಬಿಗೆ ಅಗ್ರ ಮಣೆ
ಬೆಂಗಳೂರು,
ಮಾರ್ಚ್ 2: ಸ್ಥಾಪನೆಯಾದ ವರ್ಷದಿಂದಲೇ ಸುಸ್ಥಿರವಾಗಿ, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಪ್ರಸ್ತುತ ರಾಜ್ಯದ 280 ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪೈಕಿ ಠೇವಣಿ ಸಂಗ್ರಹದಲ್ಲಿ ಅಗ್ರಸ್ಥಾನ ಪಡೆದಿದೆ. id="toptextpromo">ಪ್ರಸ್ತುತ
35ನೇ ವರ್ಷಾಚರಣೆಯ ಹೊಸ್ತಿಲಲ್ಲಿರುವ ಬ್ಯಾಂಕ್, ತನ್ನ ಗ್ರಾಹಕರಿಗೆ ನಿಶ್ಚಿತ ಠೇವಣಿಗಳ ಮೇಲೆ ವಿಶೇಷ ಬಡ್ಡಿ ದರ ಘೋಷಿಸಿದೆ. ಇಂದಿನಿಂದ ಮಾರ್ಚ್ 31ರವರೆಗೆ 444 ದಿನಗಳ ಠೇವಣಿಗಳಿಗೆ ಶೇ. 9.75, ಹಿರಿಯ ನಾಗರಿಕರ ಠೇವಣಿಗಳ ಮೇಲೆ ಶೇ. 10.25ರಷ್ಟು ಬಡ್ಡಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ಮಹಾನಗರ ಒಂದರಲ್ಲೇ 8 ಶಾಖೆಗಳನ್ನು ಹೊಂದಿರುವ ಬ್ಯಾಂಕ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ 9ನೇ ಶಾಖೆಯನ್ನು ತೆರೆಯುವ ಸಿದ್ಧತೆಯಲ್ಲಿದೆ. ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪೈಕಿ 2ನೇ ಅತಿದೊಡ್ಡ ಬ್ಯಾಂಕ್ ಆಗಿರುವ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್, ಪ್ರಸ್ತುತ 30 ಸಾವಿರ ಸದಸ್ಯರನ್ನು ಹೊಂದಿದ್ದು, 1 ಲಕ್ಷ 35 ಸಾವಿರ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ. ಎಟಿಎಂ ಸೌಲಭ್ಯವನ್ನೂ ಹೊಂದಿರುವ ಬ್ಯಾಂಕ್ ಆರಂಭದ ದಿನದಿಂದಲೂ ಎ ಆಡಿಟ್ ಶ್ರೇಣಿ ಪಡೆದಿದೆ. ಒಟ್ಟು 950 ಕೋಟಿ ರು ವಹಿವಾಟು ಹೊಂದಿರುವ ಬ್ಯಾಂಕ್ ಈ ವರ್ಷ 1000 ಕೋಟಿ ರು ವಹಿವಾಟಿನ ಗುರಿ ಹೊಂದಿದೆ ಎಂದು ಬ್ಯಾಂಕ್‌ನ ಅಧ್ಯಕ್ಷರಾದ ಎಚ್.ಆರ್. ಸುರೇಶ್ ತಿಳಿಸಿದ್ದಾರೆ.











Click it and Unblock the Notifications