ಕ್ರಿಕೆಟ್‌ನಲ್ಲಿ ಪದವಿ ಬೇಕೆ? ವಿಂಡೀಸ್ ವಿಮಾನ ಹತ್ತಿ!

westindies
ಬೆಂಗಳೂರು, ಫೆ.27: ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ಗುಂಗಿನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸರಳ ಪ್ರಶ್ನೆ. ಕ್ರಿಕೆಟ್ ವಿಷಯದಲ್ಲಿ ಪದವಿ ಶಿಕ್ಷಣ ನೀಡುವ ವಿಶ್ವವಿದ್ಯಾಲಯ ಜಗತ್ತಿನ ಯಾವ ಮೂಲೆಯಲ್ಲಿದೆ? ಎಲ್ಲೂ ಇಲ್ಲ ಎಂಬ ಉತ್ತರ ನಿಮ್ಮದಾಗಿದ್ದರೆ ನಿಮ್ಮ ಕ್ರಿಕೆಟ್ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನೀವು ತಕ್ಷಣ ವೆಸ್ಟ್ ಇಂಡೀಸ್‌ಗೆ ಸೀಮೋಲ್ಲಂಘನ ಮಾಡುವುದು ಒಳಿತು.

ಏಕೆಂದರೆ ಅಲ್ಲಿದೆ, ವಿಂಡೀಸ್‌ನ ಬಾರ್ಬಡೋಸ್‌ನಲ್ಲಿ. ಕ್ರಿಕೆಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡುವ ವಿಶ್ವವಿದ್ಯಾಲಯ. ಅದುವೇ ಸಿಎಲ್‌ಆರ್ ಜೇಮ್ಸ್ ಸೆಂಟರ್ ಫಾರ್ ಕ್ರಿಕೆಟ್ ರೀಸರ್ಚ್ ಅಟ್ ಯೂನಿವರ್ಸಿಟಿ ಆಫ್ ವೆಸ್ಟ್ ಇಂಡೀಸ್ ಕೇವ್ ಹಿಲ್, ಬಾರ್ಬಡೋಸ್ ಕ್ಯಾಂಪಸ್!

ಎಂಎಸ್‌ಸಿ ಇನ್ ಕ್ರಿಕೆಟ್ ಸ್ಟಡೀಸ್:
ಇಲ್ಲಿ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ನಲ್ಲಿ ಒಂದು ವರ್ಷ ಕಾಲ ಹೇಳಿಕೊಡಲಾಗುವುದು. ಶಿಕ್ಷಣದ ಬಳಿಕ 'ಎಂಎಸ್‌ಸಿ ಇನ್ ಕ್ರಿಕೆಟ್ ಸ್ಟಡೀಸ್' ಎಂಬ ಸ್ನಾತಕೋತ್ತರ ಪದವಿ ಪ್ರದಾನ ಮಾಡುತ್ತಾರೆ. ವಿಶ್ವದಲ್ಲಿ ಇಂತಹ ಪದವಿ ನೀಡುವ ವಿವಿ ಇದೊಂದೇ! ಸದ್ಯಕ್ಕೆ ಇಲ್ಲಿನ ಶಿಕ್ಷಣ ವಿಂಡೀಸ್ ಕ್ರಿಕೆಟ್‌ನತ್ತಲೇ ಗಿರಕಿ ಹೊಡೆಯುತ್ತಿದೆ. ಮುಂದೆ ಇದು ವಿಶ್ವಸ್ತರವಾಗಲಿದೆ.

ಆಧುನಿಕ ಕ್ರಿಕೆಟ್ ಹೇಗಿದೆಯೆಂದರೆ ನನಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ಬಗ್ಗೆ ಎಲ್ಲ ಗೊತ್ತು ಎಂದು ಉಡಾಫೆ ಮಾಡುವ ಹಾಗಿಲ್ಲ. ಕ್ರಿಕೆಟ್‌ನ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಇಂತಹ ಪದವಿ ಅನಿವಾರ್ಯವಾಗಿದೆ. ವಿಂಡೀಸ್‌ನ ಮಾಜಿ ಮತ್ತು ಹಾಲಿ ಘಟಾನುಘಟಿ ಕ್ರಿಕೆಟ್ ಪಟುಗಳು ಇಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಶೈಕ್ಷಣಿಕ ವರ್ಷ ಏಪ್ರಿಲ್-ಮೇನಲ್ಲಿ ಆರಂಭವಾಗುತ್ತದೆ.

ಶಿಕ್ಷಣ ಶುಲ್ಕ 10,000 ಅಮೆರಿಕನ್ ಡಾಲರ್ ಅಂದರೆ ಸುಮಾರು 5 ಲಕ್ಷ ರು. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ರಾಜಕೀಯ ಮತ್ತು ಸಾಮಾಜಿಕ ಚರಿತ್ರೆ, ಪ್ರಚಲಿತ ಜಾಗತಿಕ ಕ್ರಿಕೆಟ್, ಕ್ರಿಕೆಟ್ ಸಂಸ್ಕೃತಿಯಲ್ಲಿ ಹಣಕಾಸು, ಕ್ರೀಡಾ ಮನೋವಿಜ್ಞಾನ, ನಾಯಕತ್ವದ ಗುಣಗಳು, ಮಾನವ ಸಂಪನ್ಮೂಲ ನಿರ್ವಹಣೆ, ಕ್ರಿಕೆಟ್ ದಿಗ್ಗಜರ ಕುರಿತು ಪಠ್ಯವಿರುತ್ತದೆ. ರೀಸರ್ಚ್ ಪ್ರಾಜೆಕ್ಟ್ ಮತ್ತು ಪ್ರಾಕ್ಟಿಕಲ್ಸ್ ಒಳಗೊಂಡ ಈ ಸ್ನಾತಕೋತ್ತರ ಪದವಿಯನ್ನು ನಾಲ್ಕು ವರ್ಷಗಳ ಹಿಂದೆ ಜಾರಿಗೊಳಿಸಲಾಯಿತು.

ಪ್ರವೇಶ ಅರ್ಹತೆಗಳೆಂದರೆ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕನಿಷ್ಠ ಮೂರು ವರ್ಷದ ಉದ್ಯೋಗಾನುಭವ ಅಥವಾ ಮತ್ಯಾವುದೇ ಕ್ರೀಡೆಯಲ್ಲಿ ಎರಡು ವರ್ಷದ ಅನುಭವ. ಕಳೆದ ವರ್ಷ ಕಾಲಿ ಕ್ರಾಫ್ಟ್ ಮತ್ತು ಕ್ಲೈವ್ ಲಾಯ್ಡ್ ಸೇರಿದಂತೆ ಒಟ್ಟು ಆರು ಮಂದಿ ಇಲ್ಲಿ ಕ್ರಿಕೆಟ್ ವ್ಯಾಸಂಗ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಈ ವರ್ಷದ ಪ್ರಮುಖ ವಿಷಯವಾಗಿತ್ತು. ಈ ವಿಷಯದ ಕುರಿತು ಪ್ರತಿಷ್ಠಿತ ಫ್ರಾಂಕ್ ವೋರೆಲ್ ಮೆಮೋರಿಯಲ್ ಲೆಕ್ಚರ್ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+