ನರ್ಸಿಂಗ್ ಪರೀಕ್ಷೆ ಸಿಸಿಟಿವಿ ಶೂಟಿಂಗ್ : ರಾಮದಾಸ್

Minister SA Ramdas
ಬೆಂಗಳೂರು, ಫೆ.22: ನರ್ಸಿಂಗ್ ಮಾಫಿಯಾದಿಂದ ಬೆದರಿಕೆ ಕರೆಗಳು ಬಂದರೂ ಲೆಕ್ಕಿಸದೆ, ವೈದ್ಯಕೀಯ ಶಿಕ್ಷಣ ಸಚಿವ ಎಸ್ ಎ ರಾಮದಾಸ್ ಆಸ್ಪತ್ರೆಗಳ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಈಗ ನರ್ಸಿಂಗ್ ಪರೀಕ್ಷೆಯಲ್ಲಿ ನಡೆಯುವ ಅವ್ಯವಹಾರಕ್ಕೆ ಕಡಿವಾಣ ಹಾಕಲು ಸಿಸಿಟಿವಿ ಅಳವಡಿಸಿ, ಕಾಪಿ ಹೊಡೆಯುವ ನರ್ಸ್ ಗಳಿಗೆ ಚುರುಕುಮುಟ್ಟಿಸಿದ್ದಾರೆ.

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜಿಎಸ್ ವೆಂಕಟೇಶ್ ಅವರು ನೀಡಿದ ವರದಿಯನ್ನು ಆಧರಿಸಿ, ಸಚಿವರು ಈ ರೀತಿ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ನರ್ಸಿಂಗ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ದಿಢೀರ್ ಭೇಟಿ ನೀಡಿದ ಸಚಿವ ರಾಮದಾಸ್ ಸುಮಾರು 43 ಕಾಲೇಜುಗಳಿಗೆ ಸೇರಿದ 2,500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಪಿ ಹೊಡೆಯುವಾಗ ಹಿಡಿದಿದ್ದಾರೆ. ಇವರಲ್ಲಿ ಮೂವರನ್ನು ತಕ್ಷಣವೇ ಡಿಬಾರ್ ಮಾಡಿದ್ದಾರೆ.

ಚಿಕಿತ್ಸೆಯ ದರಪಟ್ಟಿ ಪ್ರದರ್ಶಿಸಿ: ಎಲ್ಲ ಖಾಸಗಿ ಆಸ್ಪತ್ರೆಗಳು ಮಾರ್ಚ್ ಒಂದರಿಂದ ಪ್ರತಿಯೊಂದು ಚಿಕಿತ್ಸೆಯ ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ನ್ನು ಸರ್ಕಾರ ಕಾರ್ಯಗತಗೊಳಿಸುವುದು ಹಾಗೂ ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್ಎ ರಾಮದಾಸ್ ಹೇಳಿದ್ದಾರೆ.

ಈ ಕಾಯ್ದೆ ಅನ್ವಯ ಎಲ್ಲ ವೈದ್ಯಕೀಯ ಸಂಸ್ಥೆಗಳು ವಿವಿಧ ಚಿಕಿತ್ಸೆಗಳು ಮತ್ತು ಸೇವೆಗಳ ದರಪಟ್ಟಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವುದು ಅಗತ್ಯವಾಗಿದೆ. ಅದೇ ರೀತಿ ದರ ಪಟ್ಟಿಯನ್ನು ಪುಸ್ತಿಕೆಯ ರೂಪದಲ್ಲೂ ತರಬೇಕು. ಪ್ರತಿ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸುವ ಸರಕಾರಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಹೆಸರುಗಳನ್ನೂ ವೈದ್ಯಕೀಯ ಸಂಸ್ಥೆಗಳು ನೀಡಬೇಕು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+