ನೋಕಿಯಾದಿಂದ 2 ಮಿತವ್ಯಯಿ ಮೊಬೈಲ್ ಗಳು

ಕಡಿಮೆ ಬೆಲೆಗೆ ಸಿಗುವ ಈ ಎರಡು ಮೊಬೈಲ್ ಗಳ ಪ್ರಮುಖ ಆಕರ್ಷಣೆ 32 GB ಮೆಮೋರಿ ವಿಸ್ತರಣಾ ಸೌಲಭ್ಯ. ಸ್ಮಾರ್ಟ್ ಫೋನ್ ಮಾರುಕಟ್ಟೆಗಿಂತ ಮಧ್ಯಮ ಶ್ರೇಣಿ ಮೊಬೈಲ್ ಗಳಲ್ಲಿ ನೋಕಿಯಾ ಹೆಚ್ಚಿನ ಹಿಡಿತ ಸಾಧಿಸಿದೆ. ಹಾಗಾಗಿ ಲೋ ಎಂಡ್ ಮೊಬೈಲ್ ಶ್ರೇಣಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಲೇ ಬಂದಿದೆ.
ನೋಕಿಯಾ C1-01 ಬೆಲೆ 2,789 ರು. 65K ವರ್ಣಮಯ ಟಿಎಫ್ ಟಿ ಸ್ಕ್ರೀನ್ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೋರಿಯನ್ನು ವಿಸ್ತರಿಸಿಕೊಳ್ಳಬಹುದು. ಬ್ಲೂಟೂಥ್ 2.1 ಜೊತೆಗೆ A2DP ಹಾಗೂ EDR ಸೌಲಭ್ಯ ಕೂಡಾ ಇದೆ.VGA ಕೆಮೆರಾ ಇದೆ. ಉಳಿದಂತೆ, ಎಫ್ ಎಂ ರೇಡಿಯೋ, ಒಪೆರಾ ಮಿನಿ ಬ್ರೌಸರ್, ಎಂಪಿ 3 ಪ್ಲೇಯರ್ ಇದ್ದು ಮಲ್ಟಿ ಮೀಡಿಯಾ ಫೋನ್ ಆಗಿ ಕೂಡಾ ಕಾರ್ಯ ನಿರ್ವಹಿಸಬಲ್ಲದಾಗಿದೆ.
C1-02 ಕೂಡ C1- 01 ನ ಎಲ್ಲಾ ಗುಣಗಳನ್ನು ಹೊಂದಿದೆ. ಆದರೆ ಇದರಲ್ಲಿ ಕೆಮರಾ ಸೌಲಭ್ಯವಿಲ್ಲ. ಉಳಿದಂತೆ ಸಿ1-01 ನಲ್ಲಿದ್ದಂತೆ ಎಫ್ ಎಂ ರೇಡಿಯೋ, ಬ್ಲೂಟೂಥ್, ಮ್ಯೂಸಿಕ್ ಪ್ಲೇಯರ್ ಇಲ್ಲವೂ ಇದೆ.
ಸುಲಭವಾಗಿ ಇಂಟರ್ ನೆಟ್ ಬ್ರೌಸಿಂಗ್ ಒದಗಿಸಬಲ್ಲ ಮೊಬೈಲ್ ಗಳಿಗೆ ಒಳ್ಳೆ ಮಾರುಕಟ್ಟೆ ಇದೆ. ಸಿ- ಸರಣಿಯ ಮೊಬೈಲ್ ನಲ್ಲಿ 32ಜಿಬಿ ಮೆಮೋರಿ ವಿಸ್ತರಣೆ ನೀಡುವ ಮೂಲಕ ಮಾಹಿತಿ, ಮನರಂಜನೆಯ ಖಜಾನೆಯಂತೆ ಮೊಬೈಲ್ ಬಳಕೆಯಾಗುವ ನಿರೀಕ್ಷೆಯಿದೆ ಎಂದು ನೋಕಿಯಾ ದಕ್ಷಿಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿಎಸ್ ಶ್ರೀಧರ್ ಹೇಳುತ್ತಾರೆ.
ನೋಕಿಯಾ C1-02 2,354 ರು.ಗೆ ಲಭ್ಯವಿದ್ದು, ಚೈನೀಸ್ ಮಾಡೆಲ್ ಮೊಬೈಲ್ ಗೆ ಸಡ್ಡು ಹೊಡೆಯಲು ಸಿದ್ಧವಾಗಿದೆ. ಇದಲ್ಲದೆ ಪ್ರಭಾವಿ ವಾಣಿಜ್ಯ ಉಪಯೋಗಿ E7 ಮೊಬೈಲ್ ಅನ್ನು ನೋಕಿಯಾ ಪರಿಚಯಿಸಲು ಸಿದ್ಧತೆ ನಡೆಸಿದೆ.












Click it and Unblock the Notifications