ಬಿಎಂಆರ್ ಸಿಎಲ್ ಬಿಎಂಟಿಸಿ ಪಾಸು @70ರು

ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ಪ್ರಾರಂಭಿಸುವುದರೊಂದಿಗೆ ಬಿಎಂಟಿಸಿ ಮತ್ತು ಬಿಎಂಆರ್ ಸಿಎಲ್ ಸೇವೆಗಳಲ್ಲಿ ಅಪರಿಮಿತ ಪ್ರಯಾಣಕ್ಕಾಗಿ ಜಂಟಿ ದಿನದ
ಪಾಸ್ ಪರಿಚಯಿಸಲು ಈ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಎಂಬಿಟಿ ಪಾಸ್ ಎಂದು ಹೆಸರಿಸಲಾಗಿದೆ. ಈ ಎಂಬಿಟಿ ಪಾಸ್ ಹಾಲಿ ಇರುವ ದಿನದ ಪಾಸ್ ಮಾದರಿಯ ಜೊತೆಗೆ ಬಾರ್‌ಕೋಡ್ ಲಕ್ಷಣವನ್ನು ಒಳಗೊಂಡಿರುವ (ಸರಾಗ್ ಮತ್ತು ಸರಳ್) ಎಂಬ ಎರಡು ವರ್ಗಗಳ ಪಾಸುಗಳಿರುತ್ತವೆ.
ಸರಾಗ್: ಇದು ಬಸ್ - ಮೆಟ್ರೋ ದಿನದ ಪಾಸು. ಇದರಲ್ಲಿ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ 24 ಗಂಟೆಗಳ ಮಿತಿ ಇಲ್ಲದ ಪ್ರಯಾಣ. ದರ 70 ರೂ.
ಸರಳ್: ವಾಯು ವಜ್ರ ಸೇವೆಯನ್ನು ಹೊರತುಪಡಿಸಿ ಬಿಎಂಟಿಸಿಯ ವಜ್ರ ಮತ್ತು ಇತರೆ ಎಲ್ಲಾ ಸೇವೆಗಳಲ್ಲಿ ಹಾಗೂ ಬಿಎಂಆರ್‌ಸಿಎಲ್ ಸೇವೆಗಳಲ್ಲಿ 24 ಗಂಟೆಗಳ ಮಿತಿ ಇಲ್ಲದ ಪ್ರಯಾಣ. ದರ 110 ರೂ.












Click it and Unblock the Notifications