ಪ್ರಥಮ ರ‌್ಯಾಂಕ್ ಕೈಜಾರಿದ್ದಕ್ಕೆ ಆತ್ಮಹತ್ಯೆ

ನಗರದ ಎಸ್ಸೆಸ್ ಲೇಔಟ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಶಾಮನೂರು ಬಾಪೂಜಿ ಪಾಲಿಟೆಕ್ನಿಕ್‌ನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ನಿಯಾ ತಾಜ್ (20) ಮೃತಳು. ನಿಯಾ ತಾಜ್ ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ರ‌್ಯಾಂಕ್ ಗಳಿಸಿದ್ದಳು. ಆದರೆ, 5ನೇ ಸೆಮಿಸ್ಟರ್‌ನಲ್ಲಿ ಕೇವಲ ಆರು ಅಂಕಗಳಿಂದ ಪ್ರಥಮ ರ್‍ಯಾಂಕ್ ಕೈತಪ್ಪಿತ್ತು.
ಇದರಿಂದ ತೀವ್ರವಾಗಿ ನಿರಾಶೆಗೊಂಡ ನಿಯಾ, ತಂದೆ-ತಯಿ ಇಬ್ಬರೂ ಇಲ್ಲದಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಶುಕ್ರವಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಿದ ನಿಯಾ, ತನಗೆ ಎರಡನೇ ರ‌್ಯಾಂಕ್ ಬಂದಿದ್ದನ್ನು ಖಾತ್ರಿ ಪಡಿಸಿಕೊಂಡಿದ್ದಾಳೆ.
ಮೊದಲ ರ್‍ಯಾಂಕ್ ಗಳಿಸಿದ ನಿಯಾ ಸಹಪಾಠಿ ತಾನು ಯಾಕಾದರೂ 6 ಅಂಕ ಹೆಚ್ಚು ಗಳಿಸಿದೆನೋ ಎಂಬುದಾಗಿ ಗೋಳಿಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಪೀರಿಯಾರಿಟಿ ಕಾಂಪ್ಲೆಕ್ಸ್ ಹೀಗೂ ಕೆಲಸ ಮಾಡಿರಬಹುದೇ !?












Click it and Unblock the Notifications