ಭಾರತ-ದಕ್ಷಿಣ ಆಫ್ರಿಕಾ ಆಸೀಸ್ ನಿಜ ವೈರಿಗಳು: ರಿಕಿ

ಬೆಂಗಳೂರು, ಫೆ. 11: ವಿಶ್ವಕಪ್ ಕ್ರಿಕೆಟ್ 2011 ಟೂರ್ನಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳೇ ಪ್ರಮುಖ ಪ್ರತಿಸ್ಪರ್ಧಿಗಳು ಎಂದು ಆಸ್ಟೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಕಳೆದ ರಾತ್ರಿ ಬೆಂಗಳೂರಿಗೆ ಬಂದಿಳಿದ ಪಂಟರ್ ಪಡೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದೆ.

ಅಭ್ಯಾಸ ನಿರತರಾಗಿದ್ದ ನಾಯಕ ಪಾಂಟಿಂಗ್, ಕೊಂಚ ಕಾಲ ಬಿಡುವು ಮಾಡಿಕೊಂಡು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಉಪಖಂಡದ ಪಿಚ್ ಗಳು ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಗೆ ಸಹಕಾರಿಯಾಗಿದೆ. ಇಲ್ಲಿನ ಪಿಚ್ ಹಾಗೂ ವಾತಾವರಣಕ್ಕೆ ತಕ್ಕಂತೆ ತಂಡವನ್ನು ಆರಿಸಲಾಗಿದೆ ಎಂದರು.

ಯಾರಿಗೆ ಕಪ್ ?: ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರೀಟ್ ತಂಡಗಳ ಪಟ್ಟಿಯಲ್ಲಿ ಆಸೀಸ್ ಹೆಸರು ಇಲ್ಲವಲ್ಲ ಏನು ಕಾರಣ? ಎಂಬ ಪ್ರಶ್ನೆಗೆ ಜಾರಿಕೆ ಉತ್ತರ ನೀಡಿದ ರಿಕಿ, ಎಲ್ಲಾ ತಂಡಗಳು ಉತ್ತಮ ಫಾರ್ಮ್ ಹೊಂದಿವೆ. ಯಾವ ತಂಡ ಬೇಕಾದರೂ ಪ್ರಶಸ್ತಿ ಗೆಲ್ಲಬಹುದು. ಆಸೀಸ್ ಬ್ಯಾಟಿಂಗ್ ಎಲ್ಲಾ ತಂಡಕ್ಕಿಂತ ಉತ್ತಮ ಎಂದರು.

ಕ್ರಿಕೆಟ್ ವಿಶ್ವಕಪ್ 2011 ವೇಳಾಪಟ್ಟಿ

ಮೈಕ್ ಹಸ್ಸಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದು ಕೊಂಚ ಹಿನ್ನೆಡೆಯಾದರೂ, ಆಸೀಸ್ ತಂಡ ಅಲ್ ರೌಂಡರ್ ಗಳಿಂದ ಕೂಡಿದ್ದು, ಸಮತೋಲನ ಕಾಯ್ದುಕೊಂಡಿದೆ ಎಂದರು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಉತ್ತಮ ಲಯದಿಂದ ಕೂಡಿದ್ದು, ಆಸ್ಟ್ರೇಲಿಯಾದ ಗೆಲುವಿನ ಓಟವನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ಆದರೆ, ಪ್ರತಿ ತಂಡಕ್ಕೂ ಪ್ರತ್ಯೇಕ ರಣನೀತಿಯನ್ನು ರೂಪಿಸಲಾಗಿದ್ದು, ಮೈದಾನದಲ್ಲಿ ನೀವೆ ಕಾಣಬಹುದು. ಸಾಂಘಿಕ ಹೋರಾಟದ ಮೂಲಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ವಿಶ್ವಾಸ ನಮಗಿದೆ ಎಂದು ಪಾಂಟಿಂಗ್ ಹೇಳಿ ಮತ್ತೊಮ್ಮೆ ಬ್ಯಾಟಿಂಗ್ ಅಭ್ಯಾಸ ಮಾಡಲು ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+