ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಪಿಎಂ
ರೋಮ್,
ಫೆ.9: ದೇಶದ ಉನ್ನತ ಹುದ್ದೆಯಲ್ಲಿರುವ ನಾಯಕರುಗಳೇ ಕಾಮಕಾಂಡದಲ್ಲಿ ಸಿಲುಕಿದರೆ, ಇಡೀ ದೇಶವೇ ತಲೆ ತಗ್ಗಿಸಬೇಕಾಗುತ್ತದೆ. ಈಗ ಇಟಲಿಯಲ್ಲೂ ಅದೇ ಪರಿಸ್ಥಿತಿ ಉದ್ಭವಿಸಿದೆ. ಕಾಮಕಾಂಡದ ಹಗರಣದಲ್ಲಿ ಸಿಲುಕಿರುವ ಇಟಲಿಯ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಮಹಿಳೆಯೊಬ್ಬಳ ಜತೆಗಿನ ನಗ್ನ ಚಿತ್ರ ಸುಮಾರು 1 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದೆ ಎಂದು ಇಟಲಿಯ ಮಾಧ್ಯಮವೊಂದರ ವರದಿ ತಿಳಿಸಿದೆ. ಪತ್ರಿಕೆ ವಿರುದ್ಧ ಬೆರ್ಲುಸ್ಕೋನಿ ವಕೀಲರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. id="toptextpromo">ಬೆರ್ಲುಸ್ಕೋನಿ
ಅವರು ಮಹಿಳೆ ಜತೆ ನಗ್ನವಾಗಿರುವುದನ್ನು ಆ ಫೋಟೋಗಳಿಂದ ಸ್ಪಷ್ಟವಾಗಿ ಕಂಡುಬಂದಿದೆ.ಪ್ರಧಾನಿ ಸ್ತ್ರೀಲೋಲುಪ ಎಂದು ಇಟಲಿಯ ಮಾಧ್ಯಮದ ವರದಿಯಲ್ಲಿ ಹೇಳಿದೆ. ಅದರೆ, ಪ್ರಧಾನಿ ನಗ್ನರಾಗಿರುವ ಫೋಟೊ ಪ್ರಕಟಿಸಿದರೆ ಇದು ಅವರ ಖಾಸಗಿ ವಿಷಯವಾಗಿದ್ದರಿಂದ ಆ ಫೋಟೋವನ್ನು ಪ್ರಕಟಿಸಿಲ್ಲ ಎಂದು ಹೇಳಿದೆ. ಇಟಲಿಯ ಎಡಪಂಥೀಯರು ಬೃಹತ್ ಮೆರವಣಿಗೆ ನಡೆಸಿ ಇಟಲಿಯ ಮಾನ ಕಳೆಯುತ್ತಿರುವ ಪ್ರಧಾನಿ ಬೆರ್ಲುಸ್ಕೋನಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಬೆರ್ಲುಸ್ಕೋನಿ ಅವರ ವಕೀಲರಾದ ನಿಕ್ಕೋಲೋ ಘೆಡಿನಿ ಮತ್ತು ಪಾಲೋ ಲೋಂಗೋ ಅವರು ನೀಡಿರುವ ಹೇಳಿಕೆಯಲ್ಲಿ, ಈ ಫೋಟೋಗ್ರಾಫ್ಸ್ ಸತ್ಯಕ್ಕೆ ದೂರವಾದದ್ದು, ಅಲ್ಲದೇ ಇದನ್ನು ಕೃತವಾಗಿ ಸಂಕಲನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 74ರ ಹರೆಯದ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ಸೆಕ್ಸ್ ಸ್ಕ್ಯಾಂಡಲ್ ದೇಶದಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಬೆರ್ಲುಸ್ಕೋನಿ ಅವರಿಗೆ ಹಲವಾರು ಅನೈತಿಕ ಸಂಬಂಧಗಳಿದ್ದು, ಅವರು ತಮ್ಮ ಪ್ರಿಯತಮೆಯರಿಗೆ ಕೋಟ್ಯಂತರ ರೂಪಾಯಿ ಹಣ(ಸುಮಾರು £100K) ನೀಡಿರುವುದಾಗಿ ಆರೋಪಿಸಲಾಗಿದೆ.











Click it and Unblock the Notifications