ಯಲಹಂಕದತ್ತ ಜನಸಾಗರ, ಆಕಾಶದಲ್ಲಿ ಟ್ರಾಫಿಕ್ ಜಾಮ್

ಯಲಹಂಕದ ಏರ್ ಫೋರ್ಸ್ ಬೇಸ್ ಅಂಗಳಕ್ಕೆ ಎಲ್ಲರೂ ಮುಖಮಾಡಿರುವುದರಿಂದ ಬಳ್ಳಾರಿ ರಸ್ತೆಯಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗುತ್ತಿದೆ. ಇದು ನಾಡಿದ್ದು ಭಾನುವಾರ ತನಕ ಹೀಗೆಯೇ ಮುಂದುವರೆಯಲಿದೆ. ಹೀಗಾಗಿ ಆದಷ್ಟು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸಿದರೆ ನೀವು ಟ್ರಾಫಿಕ್ ನಲ್ಲಿ ಸಿಲುಕದೇ ಹಾಯಾಗಿ ತಲುಪಬಹುದು.
ಬೆಂಗಳೂರು ವಿಮಾನ ನಿಲ್ದಾಣದಿಂದ ಸಾವಿರಾರು ಸಂಖ್ಯೆಯ ವಿದೇಶಿಯರು ಸೇರಿದಂತೆ ಯಲಹಂಕದತ್ತ ಮುಖ ಮಾಡಿದ್ದಾರೆ. ಹೆಚ್ಚಿನ ಸಂಚಾರಿ ದಟ್ಟಣೆಯನ್ನು ತಪ್ಪಿಸಲು ಟ್ರಾಫಿಕ್ ಪೋಲಿಸರು ಬಳ್ಳಾರಿ ರಸ್ತೆಯನ್ನು ಟೊ-ಅವೇ ಝೋನ್ ಎಂದು ಘೋಷಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಈ ನಿಯಮ ನಾಡಿದ್ದು ಭಾನುವಾರ ತನಕ ಮುಂದುವರೆಯಲಿದೆ.
ಲಾರಿ ಸೇರಿದಂತೆ ಭಾರಿ ವಾಹನಗಳಿಗೆ ಶುಕ್ರವಾರ ಮುಂಜಾನೆ ಆರು ಗಂಟೆಯಿಂದ ರಾತ್ರಿ ಭಾನುವಾರ ರಾತ್ರಿ 10ರ ತನಕ ಹೆಬ್ಬಾಳ ಮೇಲ್ಸೆತುವೆಯಿಂದ ದೇವನಹಳ್ಳಿವರೆಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ ಈ ನಿಯಮ ಬಿಎಂಟಿಸಿ, ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳಿಗೆ ಅನ್ವಯವಾಗುವುದಿಲ್ಲ.
ಇದನ್ನೂ ಓದಿ: ಬೆಂಗಳೂರು ಬಾನಲ್ಲಿ ಉಕ್ಕಿನ ಹಕ್ಕಿಗಳು
ಜಾಗತಿಕ ಖ್ಯಾತಿಯ ವೈಮಾನಿಕ ಪ್ರದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನಸೇರುವ ನಿರೀಕ್ಷೆಯಿದೆ. ಹೀಗಾಗಿ ನೀವು ವೈಮಾನಿಕ ಪ್ರದರ್ಶನಕ್ಕೆ ಹೋಗುವಿರಾದರೆ ಕೆಲವು ಗಂಟೆ ಮುಂಚೆ ನೇ ಹೋಗಿ. ಸುಮ್ಮನೆ ಟ್ರಾಫಿಕ್ ನಲ್ಲಿ ಸಿಲುಕಿ ಆಕಾಶ ನೋಡಬೇಡಿ.












Click it and Unblock the Notifications